alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರುಕಟ್ಟೆಯಲ್ಲಿ ಮೋದಿ ಗಾಳಿಪಟಕ್ಕೆ ಭರ್ಜರಿ ಬೇಡಿಕೆ

modi_emrnbka

ಮಕರ ಸಂಕ್ರಾಂತಿಗೆ ದೇಶದಾದ್ಯಂತ ಭರ್ಜರಿ ತಯಾರಿ ನಡೆಯುತ್ತಿದೆ. ನೋಟು ನಿಷೇಧದ ಎಫೆಕ್ಟ್ ನಡುವೆಯೇ ಮಾರುಕಟ್ಟೆಯಲ್ಲಿ ಖರೀದಿ ನಡೆಯುತ್ತಿದೆ. ಅಂಗಡಿಗಳಲ್ಲಿ ಸಿಹಿ ತಿಂಡಿ, ಕಬ್ಬು, ಬೆಲ್ಲದ ಜೊತೆಗೆ ಗಾಳಿಪಟ ರಾರಾಜಿಸ್ತಾ ಇದೆ. ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸುವುದು ಒಂದು ಸಂಪ್ರದಾಯ. ಈ ಬಾರಿ ಅಂಗಡಿಗೆ ಬಂದಿರುವ ಗಾಳಿಪಟ ಗಮನ ಸೆಳೆಯುತ್ತಿದೆ.

ಹೊಸ ನೋಟು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗಾಳಿಪಟದಲ್ಲಿ ರಾರಾಜಿಸ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಚುನಾವಣೆ ಹತ್ತಿರ ಬರ್ತಾ ಇದೆ. ಪ್ರಧಾನ ಮಂತ್ರಿ ಮೋದಿ ಕ್ಷೇತ್ರದಲ್ಲಿ ಅವರ ಭಾವಚಿತ್ರವುಳ್ಳ ಗಾಳಿಪಟಕ್ಕೆ ಭಾರೀ ಬೇಡಿಕೆ ಇದೆ. ವಾರಣಾಸಿ ಮಾರುಕಟ್ಟೆಯಲ್ಲಿ ರಾಜಕಾರಣಿಗಳಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಮೋದಿ ಗಾಳಿಪಟವನ್ನು ಖರೀದಿ ಮಾಡ್ತಿದ್ದಾರೆ.

ಹೊಸ 500 ಹಾಗೂ 2 ಸಾವಿರ ನೋಟಿನ ಚಿತ್ರದ ಜೊತೆ ಮೋದಿ ಚಿತ್ರವಿರುವ ಗಾಳಿಪಟವನ್ನು ಜನರು ಹೆಚ್ಚಾಗಿ ಇಷ್ಟಪಡ್ತಿದ್ದಾರೆ. ಮೋದಿ ಗಾಳಿಪಟಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇರುವುದರಿಂದ ಬೇರೆ ಯಾವ ರಾಜಕಾರಣಿಗಳ ಫೋಟೋವನ್ನು ಗಾಳಿಪಟಕ್ಕೆ ಬಳಸಲಾಗಿಲ್ಲ.

ಪ್ರಧಾನ ಮಂತ್ರಿ ಫೋಟೋ ಇರುವ ‘ಸಬ್ ಕೀ ಸಾಥ್ ಸಬ್ ಕಾ ವಿಕಾಸ್’ ಗಾಳಿಪಟಕ್ಕೂ ಬಹಳ ಬೇಡಿಕೆ ಇದೆ. ಅಂಗಡಿಯಲ್ಲಿ ಈ ಗಾಳಿಪಟದ ಬೆಲೆ 3 ರೂಪಾಯಿಯಿಂದ 300 ರೂಪಾಯಿವರೆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...