alex Certify
ಕನ್ನಡ ದುನಿಯಾ       Mobile App
       

Kannada Duniya

ದೆಹಲಿಯಲ್ಲಿ ಪ್ರತಿದಿನ ಆಗ್ತಿದೆ 11 ಮಹಿಳೆಯರ ಅಪಹರಣ!

ರಾಷ್ಟ್ರರಾಜಧಾನಿ ಮಹಿಳೆಯರಿಗೆ ಸುರಕ್ಷಿತವಲ್ಲ ಅನ್ನೋದು ಪದೇ ಪದೇ ಸಾಬೀತಾಗುತ್ತಲೇ ಇದೆ. ಆರ್ ಟಿ ಐ ಅಡಿಯಲ್ಲಿ ಇದೀಗ ಸಿಕ್ಕಿರುವ ಮಾಹಿತಿಯಂತೂ ಬೆಚ್ಚಿಬೀಳಿಸುವಂತಿದೆ. ಕಳೆದ ವರ್ಷ ದೆಹಲಿಯಲ್ಲಿ ಪ್ರತಿದಿನ ಸರಾಸರಿ 11 ಮಹಿಳೆಯರ ಅಪಹರಣವಾಗಿದೆ.

ಪ್ರಜಾ ಫೌಂಡೇಶನ್ ತನ್ನ ‘ಸ್ಟೇಟಸ್ ಆಫ್ ಕ್ರೈಮ್ & ಪೊಲೀಸಿಂಗ್’ ಅನ್ನೋ ವರದಿಯಲ್ಲಿ ಈ ವಿಷಯ ಬಹಿರಂಗಪಡಿಸಿದೆ. 2016ರಲ್ಲಿ ನಡೆದಿರುವ ಒಟ್ಟಾರೆ ಅಪಹರಣ ಪ್ರಕರಣಗಳಲ್ಲಿ ಅರ್ಧಕ್ಕೂ ಹೆಚ್ಚು ಮಹಿಳೆಯರಿಗೆ ಸಂಬಂಧಪಟ್ಟಿದ್ದು. ಒಟ್ಟು 6707 ಕಿಡ್ನಾಪ್ ಪ್ರಕರಣಗಳು ನಡೆದಿವೆ.

ಈ ಪೈಕಿ 4101 ಕೇಸ್ ಗಳಲ್ಲಿ ಮಹಿಳೆಯರ ಅಪಹರಣವಾಗಿದೆ.  2015ರಲ್ಲಿ 7937 ಅಪಹರಣ ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ ಶೇ.52.7ರಷ್ಟು ಪ್ರಕರಣಗಳಲ್ಲಿ ಮಹಿಳೆಯರೇ ಸಂತ್ರಸ್ಥರಾಗಿದ್ದಾರೆ. ಮಹಿಳೆಯರ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳದ ಸರ್ಕಾರ ಏನು ಮಾಡ್ತಿದೆ ಅನ್ನೋ ಪ್ರಶ್ನೆ ಜನರನ್ನು ಕಾಡ್ತಾ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...