alex Certify
ಕನ್ನಡ ದುನಿಯಾ       Mobile App
       

Kannada Duniya

ಕಳೆದ 5 ವರ್ಷಗಳಲ್ಲಿ ವ್ಯರ್ಥವಾಗಿದೆ 6 ಲಕ್ಷ ಲೀಟರ್ ಬ್ಲಡ್

bloodಬ್ಲಡ್ ಬ್ಯಾಂಕ್ ಹಾಗೂ ಆಸ್ಪತ್ರೆಗಳ ನಡುವಣ ಸಮನ್ವಯದ ಕೊರತೆ ಹಿನ್ನಲೆಯಲ್ಲಿ ಕಳೆದ 5 ವರ್ಷಗಳಲ್ಲಿ ಸುಮಾರು 6 ಲಕ್ಷ ಲೀಟರ್ ರಕ್ತ ವ್ಯರ್ಥವಾಗಿದೆ ಎಂಬ ಆಘಾತಕಾರಿ ಅಂಶ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಸಲ್ಲಿಸಿದ್ದ ಅರ್ಜಿಗೆ ನೀಡಿದ ಉತ್ತರದಲ್ಲಿ ಬಯಲಾಗಿದೆ.

ಚೇತನ್ ಕೊಠಾರಿ ಎಂಬವರು ಮಾಹಿತಿ ಹಕ್ಕು ಕಾಯ್ದೆಯಡಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಗೆ ಸಲ್ಲಿಸಿದ್ದ ಅರ್ಜಿಗೆ ಈ ಮಾಹಿತಿ ಒದಗಿಸಲಾಗಿದೆ. ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ರಕ್ತ ಸಂಗ್ರಹಿಸುವವರು, ಅದನ್ನು ಸೂಕ್ತವಾಗಿ ಸಂರಕ್ಷಿಸದೆ ಇರುವುದೇ ಈ ರೀತಿ ರಕ್ತ ವ್ಯರ್ಥವಾಗಲು ಕಾರಣವೆನ್ನಲಾಗಿದೆ.

ತುರ್ತು ಸಂದರ್ಭಗಳಲ್ಲಿ ರೋಗಿಗಳ ಜೀವ ಉಳಿಸಲು ದೇಶಾದ್ಯಂತ ಆನೇಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬರುತ್ತಿದ್ದು, ಇಂತಹ ಅಮೂಲ್ಯ ರಕ್ತವನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು ಆತಂಕಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...