alex Certify
ಕನ್ನಡ ದುನಿಯಾ       Mobile App
       

Kannada Duniya

ಸದನದ ‘ವಿಶ್ವಾಸ’ ಗೆದ್ದು ಬೀಗಿದ ಮೋದಿ ಸರ್ಕಾರ

ಮುಂಗಾರು ಅಧಿವೇಶನದಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ಲಾನ್ ಹಾಕಿಕೊಂಡಿದ್ದ, ಯು.ಪಿ.ಎ. ಯೋಜನೆ ಕೈ ಕೊಟ್ಟಿದೆ. ನಿನ್ನೆ ರಾತ್ರಿ ನಡೆದ ವಿಶ‍್ವಾಸ ಮತ ಯಾಚನೆಯಲ್ಲಿ ಮೋದಿ ಸರ್ಕಾರ ಭರ್ಜರಿ ಜಯ ದಾಖಲಿಸಿದೆ. ಶುಕ್ರವಾರ ಮಂಡನೆಯಾದ ಅವಿಶ್ವಾಸ ನಿರ್ಣಯ ಸೋಲು ಕಂಡಿದೆ.

ಸದನದಲ್ಲಿ ಹಾಜರಿದ್ದ 451 ಸಂಸದರು, ಬಟನ್ ಒತ್ತುವ ಮೂಲಕ ಮತ ಚಲಾಯಿಸಿದ್ರು. ಮ್ಯಾಜಿಕ್ ನಂಬರ್ 226 ಆಗಿದ್ದರಿಂದ ಎಲ್ಲರಲ್ಲೂ ಭಾರೀ ಕುತೂಹಲ ಮೂಡಿಸಿತ್ತು. ಸರ್ಕಾರದ ಪರ 325 ಸಂಸದರು ಮತ ಚಲಾಯಿಸಿದ್ರು. ಇನ್ನು ಯುಪಿಎ ಅವಿಶ್ವಾಸ ನಿರ್ಣಯ ಪರವಾಗಿ 126 ಮತಗಳು ದಾಖಲಾದವು. ನರೇಂದ್ರ ಮೋದಿ ಸರ್ಕಾರ 199 ಮತಗಳ ಅಂತರದಿಂದ ವಿಶ‍್ವಾಸಮತ ಗೆದ್ದು ಬೀಗಿತು.

ಸತತ 12 ಗಂಟೆಗಳ ಚರ್ಚೆಯ ಬಳಿಕ ಅವಿಶ್ವಾಸ ನಿರ್ಣಯ ಪ್ರಸ್ತಾವವನ್ನು ಸ್ಪೀಕರ್ ಮತಕ್ಕೆ ಹಾಕಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...