alex Certify
ಕನ್ನಡ ದುನಿಯಾ       Mobile App
       

Kannada Duniya

ಮನ ಕಲಕುತ್ತೆ ‘ಚಿನ್ನ’ದ ಹುಡುಗನ ನೋವಿನ ಕಥೆ

ಕಷ್ಟದ ಅರಿವು ಇದ್ದ ಮನುಷ್ಯ, ಸಾಧನೆಯ ಶಿಖರ ಏರಲು ಸಾಧ್ಯ….ಬಡತನದಲ್ಲಿ ಅರಳಿದ ಹೂವಂದೂ ವಿಶ್ವ ವ್ಯಾಪಿ ತನ್ನ ಕಂಪನ್ನು ಪಸರಿಸಿದೆ. ಅಂದು ಬಾಕ್ಸಿಂಗ್ ಗ್ಲೌಸ್ ಪಡೆಯಲು ಹಣ ಇರದೆ ಪರದಾಡಿದ ಯುವಕ, ಇಂದು ಅದೇ ಬಾಕ್ಸಿಂಗ್ ರಿಂಗ್ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದಾನೆ.

ಏಷ್ಯಾನ್ ಗೇಮ್ಸ್ ನಲ್ಲಿ ಬಂಗಾರದ ಸಾಧನೆ ಮಾಡಿದ ಅಥ್ಲೀಟ್ ಗಳ ಹಿಂದೆ ಒಂದೊಂದು ನೋವಿನ ಕಥೆ ಇದೆ. ರಿಂಗ್ ನಲ್ಲಿ ತನ್ನ ನಿಖರ ಪಂಚ್ ಗಳ ಮೂಲಕ 49 ಕೆ.ಜಿ. ವಿಭಾಗದ ಪುರುಷರ ಬಾಕ್ಸಿಂಗ್ ವಿಭಾಗದಲ್ಲಿ ಅಮಿತ್ ಪಾಂಘಲ್ ಚಿನ್ನದ ಪದಕ ಗೆದ್ದಿದ್ದಾರೆ. ಏಷ್ಯನ್ ಗೇಮ್ಸ್ ಫೈನಲ್ ನಲ್ಲಿ ಅಮಿತ್ ಆಡಿದ ಆಟಕ್ಕೆ ವಿಶ್ವವೇ ಸಲಾಂ ಎಂದಿದೆ. ಒಲಿಂಪಿಕ್ಸ್ ನಲ್ಲಿ ಪದಕ ವಿಜೇತ ಫಿಲಿಪೈನ್ಸ್ ನ ಕಾರ್ಲೊ ಪಾಲಂರನ್ನು ಮಣಿಸಿದ ಅಮಿತ್ ಎಲ್ಲರ ಗಮನ ಸೆಳೆದಿದ್ದಾರೆ.

ರೈತಾಪಿ ಕುಟುಂಬದ ಹಿನ್ನೆಲೆಯನ್ನು ಹೊಂದಿರುವ ಅಮಿತ್, ಬಡ ಕುಟುಂಬದಲ್ಲಿ ಜನಿಸಿದ್ರು. ಚಿಕ್ಕಂದಿನಿಂದಲೂ ಬಾಕ್ಸಿಂಗ್ ಮೇಲಿನ ಪ್ರೀತಿ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. 2011ರ ವರೆಗೂ ಅಮಿತ್ ರ ತಂದೆ ಕುಟುಂಬ ನಿರ್ವಹಣೆಗೆ ಪಡಬಾರದ ಕಷ್ಟ ಪಟ್ಟಿದ್ದಾರೆ. ಅಮಿತ್ ಸಹೋದರ, ಅಜಯ್ ಸೇನೆ ಸೇರಿದ ಮೇಲೆಯೇ ಈ ಕುಟುಂಬದ ಬವಣೆ ಕೊಂಚ ನಿವಾರಣೆ ಆಯಿತು.

ಅಮಿತ್ ರಿಗೆ ಕಷ್ಟದ ದಿನಗಳಲ್ಲಿ ಬಾಕ್ಸಿಂಗ್ ಗ್ಲೌಸ್ ಖರೀದಿಸಲು ಆಗದಷ್ಟು ಬಡತನ. ತಮ್ಮ ಬಳಿ ಗ್ಲೌಸ್ ಇಲ್ಲದೇ ಇದ್ರೂ ಸಹ, ಬೇರೆಯವರಿಂದ ಗ್ಲೌಸ್ ಪಡೆದು ಅಭ್ಯಾಸ ನಡೆಸುತ್ತಿದ್ದರು. ಅಮಿತ್ ರ ಕ್ರೀಡಾ ಪ್ರೀತಿ ಹಾಗೂ ತಾಳ್ಮೆಯ ಫಲವೇ ಇಂದು ಬಂಗಾರದ ಸಾಧನೆ ಮಾಡಲು ಸಹಾಯಕವಾಗಿದೆ.

ಅಮಿತ್ ಉತ್ತಮ ತಾಂತ್ರಿಕ ಅಂಶಗಳನ್ನು ಕರಗತ ಮಾಡಿಕೊಂಡಿದ್ದಾರೆ. ಫಲವಾಗಿ ಏಷ್ಯನ್ ಗೇಮ್ಸ್ ನಲ್ಲಿ ಸ್ವರ್ಣದ ಸಾಧನೆ ಮಾಡಲು ಸಹಾಯವಾಗಿದೆ. ಮುಂದಿನ ದಿನಗಳಲ್ಲಿ ಅಮಿತ್ ಒಲಿಂಪಿಕ್ಸ್ ನಲ್ಲೂ ಭಾರತಕ್ಕೆ ಬಂಗಾರದ ಕಿರೀಟ ತೊಡಿಸಲಿ ಎಂಬುದೇ ಎಲ್ಲರ ಆಶಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...