alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದು ದಿನ ಎಟಿಎಂನಲ್ಲಿ ಎಷ್ಟು ಮಂದಿಗೆ ಹಣ ಸಿಗುತ್ತೆ ಗೊತ್ತಾ?

tr-14

ಪ್ರತಿದಿನ ಬ್ಯಾಂಕ್ ಹಾಗೂ ಎಟಿಎಂ ಮುಂದೆ ನಿಲ್ಲೋದು ಮಾಮೂಲಿಯಾಗಿದೆ. ಗಂಟೆಗಟ್ಟಲೆ ನಿಂತರೂ ಕೈಗೆ ಹಣ ಸಿಗ್ತಾ ಇಲ್ಲ. ಎಟಿಎಂ ಮುಂದೆ ನಿಂತು ನಿಂತು ಸುಸ್ತಾದ ಮಂದಿ ಖಾಲಿ ಕೈನಲ್ಲಿ ವಾಪಸ್ ಬರ್ತಿದ್ದಾರೆ. ಎಟಿಎಂನಲ್ಲಿ ಹಣವಿಲ್ಲ ಎಂಬ ಸಂದೇಶ ಎಲ್ಲರ ನಿರಾಶೆಗೆ ಕಾರಣವಾಗ್ತಾ ಇದೆ.

2 ಸಾವಿರ ಮುಖ ಬೆಲೆಯ ನೋಟುಗಳು ಹಾಗೂ 500 ರೂಪಾಯಿ ಮುಖ ಬೆಲೆಯ ನೋಟುಗಳನ್ನು ಎಟಿಎಂಗೆ ಹಾಕಲು ಇನ್ನೂ ಕಾಲಾವಕಾಶ ಬೇಕು. ಇನ್ನೊಂದು ವಾರದಲ್ಲಿ ನೋಟುಗಳು ಗ್ರಾಹಕರ ಕೈ ಸೇರಲಿವೆ. ಈಗ ಬರೀ 100 ರ ನೋಟುಗಳನ್ನು ಮಾತ್ರ ಗ್ರಾಹಕರು ಪಡೆಯಬಹುದು.

ಒಂದು ಎಟಿಎಂಗೆ 8.8 ಲಕ್ಷ ರೂಪಾಯಿಯನ್ನು ಮಾತ್ರ ತುಂಬಲಾಗ್ತಾ ಇದೆ. ಎಲ್ಲವೂ 100 ರೂಪಾಯಿ ಮುಖ ಬೆಲೆಯ ನೋಟುಗಳು. ಒಬ್ಬ ವ್ಯಕ್ತಿ ಒಂದು ದಿನ ಎಟಿಎಂನಿಂದ ಕೇವಲ 2 ಸಾವಿರ ರೂಪಾಯಿಯನ್ನು ಮಾತ್ರ ಪಡೆಯಬಹುದಾಗಿದೆ. ಅಂದ್ರೆ ಒಂದು ಎಟಿಎಂನಲ್ಲಿ ಕೇವಲ 440 ಮಂದಿ ಮಾತ್ರ ಹಣ ಡ್ರಾ ಮಾಡಬಹುದಾಗಿದೆ. ಹಾಗಾಗಿ ಎಟಿಎಂ ಮುಂದೆ ಕ್ಯೂ ನಿಲ್ಲುವ ಮುನ್ನ ಯಾವಾಗ ಎಟಿಎಂಗೆ ಹಣ ತುಂಬಲಾಗಿದೆ? ನೀವು ಎಷ್ಟನೆಯವರು ಎಂಬ ಮಾಹಿತಿ ಸಿಕ್ಕರೆ ಅದನ್ನು ಪಡೆದ ನಂತ್ರ ಕ್ಯೂನಲ್ಲಿ ನಿಲ್ಲುವುದು ಒಳ್ಳೆಯದು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...