alex Certify
ಕನ್ನಡ ದುನಿಯಾ       Mobile App
       

Kannada Duniya

ಸೈಕಲ್ ನಲ್ಲೇ ತಂದೆಯ ಮೃತದೇಹ ಕೊಂಡೊಯ್ದ ಮಕ್ಕಳು

ಉತ್ತರ ಪ್ರದೇಶದ ಬಾರಾಬಂಕಿ ಎಂಬಲ್ಲಿ ವಿಕಲ ಚೇತನ ಮಕ್ಕಳು ತಂದೆಯ ಮೃತದೇಹವನ್ನು ಸೈಕಲ್ ನಲ್ಲಿ ಸಾಗಿಸಿದ್ದಾರೆ. 50 ವರ್ಷದ ವ್ಯಕ್ತಿ ತ್ರಿವೇದಿಗಂಜ್ ಕಮ್ಯೂನಿಟಿ ಹೆಲ್ತ್ ಸೆಂಟರ್ ನಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದ.

ಆದ್ರೆ ಆರೋಗ್ಯ ಕೇಂದ್ರದಲ್ಲಿ ಕೇವಲ ಎರಡೇ ವಾಹನಗಳಿರುವುದರಿಂದ ಶವ ಸಾಗಿಸಲು ಆಂಬ್ಯುಲೆನ್ಸ್ ನೀಡಲು ಸಾಧ್ಯವಿಲ್ಲ ಅಂತಾ ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಹಾಗಾಗಿ ವಿಧಿಯಿಲ್ಲದೇ ಮಕ್ಕಳು ಸೈಕಲ್ ನಲ್ಲೇ ಅಪ್ಪನ ಶವವನ್ನು ಕೊಂಡೊಯ್ದಿದ್ದಾರೆ.

ಅವರ ಗ್ರಾಮ ಆರೋಗ್ಯ ಕೇಂದ್ರದಿಂದ 8 ಕಿಮೀ ದೂರದಲ್ಲಿದೆ. ಯುವಕ  ವಿಕಲ ಚೇತನ, ಆತನ ಸಹೋದರಿ ಇನ್ನೂ ಚಿಕ್ಕವಳು. ಅವರ ಬಳಿ ಹಣವೂ ಇರಲಿಲ್ಲ. ಹಾಗಾಗಿ ಸೈಕಲ್ ನಲ್ಲೇ ಶವ ಹೇರಿಕೊಂಡು ಅಂತ್ಯಸಂಸ್ಕಾರಕ್ಕಾಗಿ ಮನೆಗೆ ಕೊಂಡೊಯ್ದಿದ್ದಾರೆ. ಈ ಹಿಂದೆಯೂ ಇಂತಹ ಹಲವು ಪ್ರಕರಣಗಳು ವರದಿಯಾಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...