alex Certify
ಕನ್ನಡ ದುನಿಯಾ       Mobile App
       

Kannada Duniya

ದಾರಿ ಮಧ್ಯೆ ಅಲ್ಲಲ್ಲಿ ಶವವಿಡುತ್ತ ಮುಂದೆ ಸಾಗಿದ್ರು ಸಹೋದರರು

ಮಧ್ಯಪ್ರದೇಶದ ಛತರಪುರ ಜಿಲ್ಲಾ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಶವ ಸಾಗಿಸಲು ಆಸ್ಪತ್ರೆ ಯಾವುದೇ ವ್ಯವಸ್ಥೆ ಮಾಡಲಿಲ್ಲ. ಇದ್ರಿಂದ ನೊಂದ ಸಹೋದರರು ಶವವನ್ನು ಹೆಗಲ ಮೇಲೆ ಹೊತ್ತು ಸಾಗಿದ್ದಾರೆ.

ಮಾಧ್ಯಮದವರ ಕಣ್ಣು ಸಹೋದರರ ಮೇಲೆ ಬಿದ್ದಿದೆ. ವಿಚಾರಣೆ ನಡೆಸಿದಾಗ ಜಿಲ್ಲಾಸ್ಪತ್ರೆ ಬಣ್ಣ ಬಯಲಾಗಿದೆ. ವ್ಯಕ್ತಿ ಸಾವನ್ನಪ್ಪಿದ ನಂತ್ರ ಶವ ಸಾಗಿಸಲು ವಾಹನ ನೀಡುವಂತೆ ಸಹೋದರರು ಕೇಳಿದ್ದಾರೆ. ಆ್ಯಂಬುಲೆನ್ಸ್ ಗೂ ಕರೆ ಮಾಡಿದ್ದಾರೆ. ಸ್ವಲ್ಪ ಸಮಯ ನೀಡಿ ಎನ್ನುತ್ತಲೇ ಆಸ್ಪತ್ರೆ ಸಿಬ್ಬಂದಿ 2 ಗಂಟೆ ತೆಗೆದುಕೊಂಡಿದ್ದಾರೆ. ಶವ ತೆಗೆದುಕೊಂಡು ಹೋಗಲು ಸ್ಟ್ರೆಚರ್ ಕೂಡ ನೀಡಲಿಲ್ಲ.

ನಂತ್ರ ವಾಹನವಿಲ್ಲವೆಂದಿದ್ದಾರೆ. ಈ ಮಧ್ಯೆ ಮಧ್ಯವರ್ತಿಯೊಬ್ಬ ಶವ ಸಾಗಿಸಲು 1500 ರೂಪಾಯಿ ನೀಡುವಂತೆ ಕೇಳಿದ್ದಾನೆ. 1200 ರೂಪಾಯಿಗೆ ವ್ಯವಹಾರ ಕುದುರಿದೆ. ಆದ್ರೆ ಸಹೋದರರ ಬಳಿ ಹಣವಿರಲಿಲ್ಲ ಎನ್ನಲಾಗಿದೆ. ಹಾಗಾಗಿ ಹೆಗಲಿನ ಮೇಲೆ ಶವನನ್ನು ಹೊತ್ತಿದ್ದಾರೆ ಸಹೋದರರು. ದಾರಿ ಮಧ್ಯೆ ಅಲ್ಲಲ್ಲಿ ಶವವನ್ನು ಇಟ್ಟು ವಿಶ್ರಾಂತಿ ತೆಗೆದುಕೊಳ್ಳುತ್ತಾ ಮುಂದೆ ಹೋಗಿದ್ದಾರೆ.

ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗ್ತಿದ್ದಂತೆ ಆ್ಯಂಬುಲೆನ್ಸ್ ಸ್ಥಳಕ್ಕೆ ಬಂದಿದೆ. ಜಿಲ್ಲಾಸ್ಪತ್ರೆಗೆ ಸಮರ್ಪಣಾ ಕ್ಲಬ್ ಶವ ವಾಹನವನ್ನು ಒದಗಿಸುತ್ತದೆ. ಈ ಬಾರಿ ತಪ್ಪು ನಡೆದಿದ್ದು, ಸೂಕ್ತ ತನಿಖೆ ನಡೆಸುವುದಾಗಿ ಸಮರ್ಪಣಾ ಕ್ಲಬ್ ಮುಖ್ಯಸ್ಥರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...