alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಬುಲೆನ್ಸ್ ಸಿಗದೇ ತಳ್ಳುಗಾಡಿಯಲ್ಲಿ ಪತ್ನಿಯ ಶವ ಸಾಗಿಸಿದ ಪತಿ

ಉತ್ತರ ಪ್ರದೇಶದಲ್ಲಿ ಜಿಲ್ಲಾಸ್ಪತ್ರೆ ಸಿಬ್ಬಂದಿ ಅಂಬುಲೆನ್ಸ್ ಒದಗಿಸಲು ನಿರಾಕರಿಸಿದ್ದರಿಂದ ವ್ಯಕ್ತಿಯೊಬ್ಬ ತಳ್ಳುಗಾಡಿಯಲ್ಲಿ ಪತ್ನಿಯ ಮೃತದೇಹವನ್ನು ಸಾಗಿಸಿದ್ದಾನೆ.

36 ವರ್ಷದ ಕನ್ಹಯ್ಯಲಾಲ್ ಒಬ್ಬ ಕಾರ್ಮಿಕ. ಈತನ ಪತ್ನಿ ಸೋನಿಗೆ ದಿಢೀರನೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಪತ್ನಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲು ಕನ್ಹಯ್ಯಲಾಲ್ 108 ಅಂಬುಲೆನ್ಸ್ ಗೆ ಕರೆ ಮಾಡಿದ್ದ. ಆದ್ರೆ ಒಂದು ಗಂಟೆ ಕಳೆದ್ರೂ ಅಂಬುಲೆನ್ಸ್ ಬರಲೇ ಇಲ್ಲ.

ಬಳಿಕ ಪತ್ನಿಯನ್ನು ತಳ್ಳುಗಾಡಿ ಮೇಲೆ ಮಲಗಿಸಿಕೊಂಡು ಕರೆದೊಯ್ದಿದ್ದಾನೆ. ಆದ್ರೆ ಆಸ್ಪತ್ರೆಗೆ ತೆರಳುವಷ್ಟರಲ್ಲಿ ಸೋನಿ ಮೃತಪಟ್ಟಿದ್ದಳು. ಆಕೆಯ ಮೃತದೇಹವನ್ನು ಅಂತ್ಯಸಂಸ್ಕಾರಕ್ಕಾಗಿ ಮನೆಗೆ ತರಲು ಅಂಬುಲೆನ್ಸ್ ವ್ಯವಸ್ಥೆ ಮಾಡಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಾರೆ.

ಆಸ್ಪತ್ರೆಗೆ ಬರುವಷ್ಟರಲ್ಲಿಯೇ ಸೋನಿ ಮೃತಪಟ್ಟಿದ್ದರಿಂದ ಅಂಬುಲೆನ್ಸ್ ಕಳಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಕನ್ಹಯ್ಯಲಾಲ್ ಹಾಗೂ ಸೋನಿ ದಂಪತಿಗೆ ನಾಲ್ವರು ಹೆಣ್ಣುಮಕ್ಕಳಿದ್ದಾರೆ. ಕೊನೆಯ ಮಗುವಿಗೆ ಕೇವಲ 3 ತಿಂಗಳಾಗಿದೆ. ಅಷ್ಟರಲ್ಲೇ ಮಗು ತಾಯಿಯನ್ನು ಕಳೆದುಕೊಂಡಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...