alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಂದು ಗಂಡಾಂತರದಿಂದ ಪಾರಾದ ಮಹಾರಾಷ್ಟ್ರ ಸಿ.ಎಂ.

fadnavis

ರಾಯ್ ಗಡ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತೊಂದು ಗಂಡಾಂತರದಿಂದ ಪಾರಾಗಿದ್ದಾರೆ.

ಲಾತೂರ್ ನಲ್ಲಿ ಮೇ 25 ರಂದು ದೇವೇಂದ್ರ ಫಡ್ನವೀಸ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು. ಅದಾಗಿ 40 ದಿನದಲ್ಲೇ ರಾಯ್ ಗಡದಲ್ಲಿ ಮತ್ತೊಂದು ಹೆಲಿಕಾಪ್ಟರ್ ಅವಘಡ ಸಂಭವಿಸಿದೆ.

ಆಲಿಭಾಗ್ ನಿಂದ ದೇವೇಂದ್ರ ಫಡ್ನವೀಸ್ ಹೊರಡಬೇಕಿದ್ದ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಉಂಟಾಗಿದೆ. ಸಿ.ಎಂ. ಹೆಲಿಕಾಪ್ಟರ್ ಹತ್ತುವ ವೇಳೆ ನೆಲಮಟ್ಟದಿಂದ ಮೇಲಕ್ಕೆದ್ದಿದೆ.

ಪೈಲಟ್ ಒಳಗಿದ್ದು, ದೇವೇಂದ್ರ ಫಡ್ನವೀಸ್ ಹೆಲಿಕಾಪ್ಟರ್ ಹತ್ತುವ ಮೊದಲೇ ರೆಕ್ಕೆಗಳು ತಿರುಗಿ ಮೇಲೆದ್ದಿದೆ. ಕೂಡಲೇ ಭದ್ರತಾ ಸಿಬ್ಬಂದಿ ಫಡ್ನವೀಸ್ ಅವರ ರಕ್ಷಣೆಗೆ ಧಾವಿಸಿದ್ದಾರೆ.

ಪೈಲಟ್ ಹೆಲಿಕಾಪ್ಟರ್ ನಿಯಂತ್ರಣಕ್ಕೆ ತೆಗೆದುಕೊಂಡು ಆಫ್ ಮಾಡಿದ್ದಾರೆ. ಹೆಲಿಕಾಪ್ಟರ್ ಚಾಲನೆ ಹಂತದಲ್ಲಿದ್ದಾಗಲೇ ರೆಕ್ಕೆಗಳು ತಿರುಗಿ ನೆಲಮಟ್ಟದಿಂದ ಮೇಲೆ ಎದ್ದಿದೆ. ಅದೃಷ್ಟವಶಾತ್ ಫಡ್ನವೀಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾವುದೇ ಅಪಘಾತ ಸಂಭವಿಸಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...