alex Certify
ಕನ್ನಡ ದುನಿಯಾ       Mobile App
       

Kannada Duniya

ನಿಜಾಮರ ವಸ್ತು ಸಂಗ್ರಹಾಲಯದಲ್ಲಿದ್ದ 50 ಕೋಟಿ ಮೌಲ್ಯದ ವಸ್ತುವಿಗೆ ಕನ್ನ

ಹೈದ್ರಾಬಾದ್ ನ ನಿಜಾಮಾ ವಸ್ತು ಸಂಗ್ರಹಾಲಯದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಭಾನುವಾರ ರಾತ್ರಿ ನಿಜಾಮರ ಬಂಗಾರದ ಟಿಫಿನ್ ಬಾಕ್ಸ್ ಹಾಗೂ ಬಂಗಾರದ ಕಪ್ ಹಾಗೂ ವಜ್ರ, ಹವಳ ಸೇರಿದಂತೆ ಅನೇಕ ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ.

ವಸ್ತುಸಂಗ್ರಹಾಲಯದ ಅಧಿಕಾರಿಗಳು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಸಿ ಟಿವಿ ದೃಶ್ಯಾವಳಿಗಳ ಆಧಾರದ ಮೇಲೆ, ಕಳ್ಳರು ವೆಂಟಿಲೇಟರ್ ದಾರಿಯಲ್ಲಿ ಒಳಗೆ ಬಂದಿದ್ದರು ಎನ್ನಲಾಗಿದೆ. ಕಳ್ಳರು ಬಂಗಾರದ ಟಿಫನ್ ಬಾಕ್ಸ್ ಹಾಗೂ ಲೋಟವನ್ನು ಕದ್ದಿದ್ದಾರೆ. ಇದನ್ನು ಹೈದ್ರಾಬಾದ್ ನ ಕೊನೆ ನಿಜಾಮ ಮೀರ್ ಉಸ್ಮಾನ್ ಅಲಿ ಖಾನ್ ಬಳಸುತ್ತಿದ್ದರಂತೆ.

ಪೊಲೀಸರು ಕಳ್ಳರ ಬಂಧನಕ್ಕೆ 10 ತಂಡವನ್ನು ರಚನೆ ಮಾಡಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ವಸ್ತುಗಳ ಬೆಲೆ 50 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಬಂಗಾರದ ಟಿಫನ್ ಬಾಕ್ಸ್ 2 ಕಿಲೋಗ್ರಾಂ ತೂಕ ಹೊಂದಿತ್ತು. ಕಳ್ಳರ ಬಂಧನಕ್ಕಾಗಿ ಪೊಲೀಸರು ವಸ್ತು ಸಂಗ್ರಹಾಲಯಕ್ಕೆ ಬೀಗ ಜಡಿದಿದ್ದಾರೆ. ವಸ್ತು ಸಂಗ್ರಹಾಲಯದ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದವರೇ ಈ ಕೆಲಸ ಮಾಡಿದ್ದಾರೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...