alex Certify
ಕನ್ನಡ ದುನಿಯಾ       Mobile App
       

Kannada Duniya

ಲಾಲು ಪುತ್ರನ ಬಂಗಲೆಯೊಳಗೆ ದೆವ್ವ ಬಿಟ್ಟಿದ್ದಾರಂತೆ ಬಿಹಾರ ಸಿಎಂ!

ಸಚಿವ ಸ್ಥಾನ ಕಳೆದುಕೊಂಡು 6 ತಿಂಗಳುಗಳ ಬಳಿಕ ಬಿಹಾರದ ಆರ್ ಜೆ ಡಿ ಮುಖಂಡ ತೇಜ್ ಪ್ರತಾಪ್ ಯಾದವ್ ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡಿದ್ದಾರೆ. ಕಳೆದ ವಾರವಷ್ಟೆ ಸರ್ಕಾರಿ ಬಂಗಲೆಯಿಂದ ಹೊರಬಿದ್ದಿರೋ ತೇಜ್ ಪ್ರತಾಪ್, ಸಿಎಂ ನಿತೀಶ್ ಕುಮಾರ್ ಈ ಮನೆಯೊಳಗೆ ದೆವ್ವಗಳನ್ನು ಬಿಟ್ಟಿದ್ದಾರೆ ಅಂತಾ ಆರೋಪಿಸಿದ್ದಾರೆ.

ಸಿಎಂ ನಿತೀಶ್ ಕುಮಾರ್ ಹಾಗೂ ಡಿಸಿಎಂ ಸುಶೀಲ್ ಕುಮಾರ್ ಮೋದಿ ಇಬ್ಬರೂ ಸೇರಿಕೊಂಡು ಬಂಗಲೆಯೊಳಗೆ ದೆವ್ವಗಳನ್ನು ಬಿಟ್ಟಿದ್ದಾರಂತೆ. ಆ ದೆವ್ವಗಳು ತಮಗೆ ಕಾಟ ಕೊಡ್ತಿವೆ ಅಂತಾ ತೇಜ್ ಪ್ರತಾಪ್ ಹೇಳಿದ್ದಾರೆ. ಈ ಬಂಗಲೆ ದೇಶ್ರತ್ನಾ ಮಾರ್ಗ್ ನಲ್ಲಿದೆ.

ಮೈತ್ರಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ತೇಜ್ ಪ್ರತಾಪ್ ಗೆ ಈ ಬಂಗಲೆಯನ್ನು ನೀಡಲಾಗಿತ್ತು. ಕಳೆದ ಜುಲೈನಲ್ಲಿ ಆರ್ ಜೆ ಡಿ ಜೊತೆಗೆ ಮೈತ್ರಿ ಕಡಿದುಕೊಂಡಿದ್ದ ನಿತೀಶ್ ಕುಮಾರ್, ಮತ್ತೆ ಬಿಜೆಪಿ ಜೊತೆ ದೋಸ್ತಿ ಮಾಡಿಕೊಂಡಿದ್ದರು. ಅದಾದ್ಮೇಲೆ ಆರ್ ಜೆ ಡಿ ಹಾಗೂ ಕಾಂಗ್ರೆಸ್ ನ ಮಾಜಿ ಮಂತ್ರಿಗಳಿಗೆಲ್ಲ ಬಂಗಲೆ ಖಾಲಿ ಮಾಡುವಂತೆ ನೋಟಿಸ್ ಕಳಿಸಲಾಗಿತ್ತು.

ಲಾಲು ಪುತ್ರ ತೇಜ್ ಪ್ರತಾಪ್ ಯಾದವ್ ಮಾಟ-ಮಂತ್ರವನ್ನೆಲ್ಲ ನಂಬ್ತಾರಂತೆ, ಅವರಲ್ಲಿ ಮೂಢನಂಬಿಕೆ ಕೂಡ ಹೆಚ್ಚಾಗಿದೆ. ಕುಟುಂಬ ಸದಸ್ಯರೆಲ್ಲ ಭ್ರಷ್ಟಾಚಾರ ಪ್ರಕರಣ ಎದುರಿಸುತ್ತಿರುವುದರಿಂದ ತೇಜ್ ಪ್ರತಾಪ್ ಈ ಬಂಗಲೆಯಲ್ಲಿ ‘ದುಷ್ಮನ್ ಮಾರನ್ ಜಾಪ್’ ಎಂಬ ಪೂಜೆ ಕೂಡ ಮಾಡಿಸಿದ್ದರು. ಎರಡನೇ ಬಾರಿ ನೋಟಿಸ್ ಕಳಿಸಿದ ಮೇಲೆ ಬಂಗಲೆ ತೆರವು ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...