alex Certify
ಕನ್ನಡ ದುನಿಯಾ       Mobile App
       

Kannada Duniya

ತಪ್ಪಾಗಿ ಪಾರ್ಕಿಂಗ್ ಮಾಡಿದ ವಾಹನದ ಫೋಟೋ ಕ್ಲಿಕ್ಕಿಸಿ ಬಹುಮಾನ ಗೆಲ್ಲಿ

ವಾಹನ ಪಾರ್ಕ್ ಮಾಡುವಾಗ ಕೆಲ ವಾಹನ ಸವಾರರನ್ನು ಬೈದುಕೊಳ್ಳುತ್ತೇವೆ. ಸರಿಯಾಗಿ ಪಾರ್ಕ್ ಮಾಡಿದ್ದರೆ ಈ ಸ್ಥಳದಲ್ಲಿ ಇನ್ನೊಂದು ವಾಹನ ನಿಲ್ಲಿಸಬಹುದಿತ್ತು ಎಂದು ಮನಸ್ಸಿನಲ್ಲಿಯೇ ಹಿಡಿ ಶಾಪ ಹಾಕುವವರಿದ್ದಾರೆ. ಇನ್ಮುಂದೆ ಜಗಳಕ್ಕಿಳಿಯುವ ಬದಲು ಮೊಬೈಲ್ ಕ್ಯಾಮರಾ ಆನ್ ಮಾಡಿ.

ಸರಿಯಾಗಿ ಪಾರ್ಕ್ ಮಾಡದ ವಾಹನಗಳ ಫೋಟೋ ತೆಗೆದು ಕಳುಹಿಸಿದ್ರೆ ಬಹುಮಾನ ಗೆಲ್ಲಬಹುದು. ಯಸ್, ಕಾರನ್ನು ಪಾರ್ಕಿಂಗ್ ಸ್ಥಳದಲ್ಲಿ ತಪ್ಪಾಗಿ ಪಾರ್ಕ್ ಮಾಡಿದ್ದರೆ ಅದ್ರ ಫೋಟೋ ತೆಗೆದು ಕಳುಹಿಸಿ ಬಹುಮಾನ ಗೆಲ್ಲಿ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಸರಿಯಾಗಿ ಪಾರ್ಕ್ ಮಾಡದ ವಾಹನಗಳ ಫೋಟೋ ತೆಗೆದು ಸಂಬಂಧಿಸಿದ ಅಧಿಕಾರಿಗಳಿಗೆ ಕಳುಹಿಸಬೇಕು. ಅವ್ರು ಪಾರ್ಕಿಂಗ್ ಮಾಡಿದ ವಾಹನ ಸವಾರನಿಗೆ 500 ರೂಪಾಯಿ ದಂಡ ವಿಧಿಸುತ್ತಾರೆ. ಹಾಗೆ ಅದ್ರಲ್ಲಿ ಶೇಕಡಾ 10ರಷ್ಟು ಹಣವನ್ನು ಫೋಟೋ ಕ್ಲಿಕ್ಕಿಸಿದ ನಿಮಗೆ ಬಹುಮಾನದ ರೂಪದಲ್ಲಿ ನೀಡ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...