alex Certify
ಕನ್ನಡ ದುನಿಯಾ       Mobile App
       

Kannada Duniya

ಈಕೆ ಭಾರತದ ಸುಂದರ ಟ್ರಾನ್ಸ್ಜೆಂಡರ್

ಗುರ್ಗಾಂವ್ ನಲ್ಲಿ ಮಿಸ್ ಟ್ರಾನ್ಸ್ಜೆಂಡರ್ ಇಂಡಿಯಾ 2017 ಸ್ಪರ್ಧೆ ನಡೆಯಿತು. ಇದೇ ಮೊದಲ ಬಾರಿ ಭಾರತದಲ್ಲಿ ಟ್ರಾನ್ಸ್ಜೆಂಡರ್ ಗಳಿಗಾಗಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಕೊಲ್ಕತ್ತಾದ ನಿತಾಶಾ ಬಿಸ್ವಾಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾಳೆ.

ನಿತಾಶಾ ಕೊಲ್ಕತ್ತಾದ ನಿವಾಸಿ. ನಿತಾಶಾಗೆ 26 ವರ್ಷ. ಕೊಲ್ಕತ್ತಾದಲ್ಲಿಯೇ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ನಲ್ಲಿ ಮಾಸ್ಟರ್ ಡಿಗ್ರಿ ಓದುತ್ತಿದ್ದಾಳೆ. ಮಣಿಪುರದ ಲೊಯೊಲೊಯಿ ಮೊದಲ ರನ್ನರ್ ಅಪ್ ಆಗಿದ್ರೆ ತಮಿಳುನಾಡಿನ ನಿವಾಸಿಗೆ ಎರಡನೇ ರನ್ನರ್ ಆಪ್ ಸ್ಥಾನ ಸಿಕ್ಕಿದೆ.

ಭಾರತದಲ್ಲಿ ನಡೆದ ಮೊದಲ ಸ್ಪರ್ಧೆಯಲ್ಲಿ ಒಟ್ಟು 16 ಟ್ರಾನ್ಸ್ಜೆಂಡರ್ ಪಾಲ್ಗೊಂಡಿದ್ದರು. 1500 ಟ್ರಾನ್ಸ್ಜೆಂಡರ್ ನಲ್ಲಿ 16 ಮಂದಿಯನ್ನು ಫೈನಲ್ ಗೆ ಆಯ್ಕೆ ಮಾಡಲಾಗಿತ್ತು.

ಆಗಸ್ಟ್ 27ರಂದು ಅಂತಿಮ ಸ್ಪರ್ಧೆ ನಡೆದಿದ್ದು, ಟ್ರಾನ್ಸ್ಜೆಂಡರ್ ರ್ಯಾಂಪ್ ವಾಕ್ ಮಾಡಿದ್ರು. 8 ಮಂದಿ ಆಯ್ಕೆ ಸೀಟಿನಲ್ಲಿ ಕುಳಿತು ನಿತಾಶಾಳಿಗೆ ಮಿಸ್ ಟ್ರಾನ್ಸ್ಜೆಂಡರ್ ಇಂಡಿಯಾ 2017ರ ಪಟ್ಟ ನೀಡಿದ್ರು. ಥೈಲ್ಯಾಂಡ್ ನಲ್ಲಿ ನಡೆಯುವ ಸ್ಪರ್ಧೆಯಲ್ಲಿ ನಿತಾಶಾ ಭಾರತವನ್ನು ಪ್ರತಿನಿಧಿಸಲಿದ್ದಾಳೆ.

ಮೂರು ವರ್ಷದಲ್ಲಿರುವಾಗಲೇ ನಿತಾಶಾಗೆ ತನ್ನ ಶರೀರದಲ್ಲಾಗುತ್ತಿರುವ ಬದಲಾವಣೆ ತಿಳಿದಿತ್ತಂತೆ. ಮನೆಯವರ ಒಪ್ಪಿಗೆಯಿಲ್ಲದೆ ಹುಡುಗನಿಂದ ಹುಡುಗಿಯಾಗಿದ್ದಳಂತೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿರುವ ನಿತಾಶಾ ತನ್ನ ಭಯವನ್ನು ಹೇಳಿಕೊಂಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಿತಾಶಾ ಇನ್ಸ್ಟ್ರಾಗ್ರಾಮ್ ನಲ್ಲಿ 11 ಸಾವಿರ ಫಾಲೋವರ್ಸ್ ಹೊಂದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...