alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಬ್ಬಾ! ಈ ವಿದ್ಯಾರ್ಥಿನಿ ಪಡೆಯುವ ವೇತನ ಕೇಳಿದ್ರೇ….

ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪಾಟ್ನಾದ ವಿದ್ಯಾರ್ಥಿನಿ ಮೇಧಾ ಕುಮಾರಿಗೆ ಅಡೋಬ್ ಸಿಸ್ಟಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಉದ್ಯೋಗದ ಆಫರ್ ನೀಡಿದೆ. ವಾರ್ಷಿಕ ಬರೋಬ್ಬರಿ 39.5 ಲಕ್ಷ ರೂಪಾಯಿ ವೇತನದ ಪ್ಯಾಕೇಜ್ ನೀಡುವುದಾಗಿ ಹೇಳಿದೆ.

ಎನ್ ಐ ಟಿ ಪಾಟ್ನಾದಲ್ಲಿ ನಡೆದ ಪ್ಲೇಸ್ಮೆಂಟ್ ಡ್ರೈವ್ 2017ರಲ್ಲಿ 38 ಕಂಪನಿಗಳು ಭಾಗವಹಿಸಿದ್ದವು. ಟಾಟಾ ಮೋಟಾರ್ಸ್, ಸ್ಯಾಮ್ಸಂಗ್ ಆರ್ & ಡಿ ಇನ್ ಸ್ಟಿಟ್ಯೂಟ್ ಇಂಡಿಯಾ, ಇಂಡಿಯಾ ಮಾರ್ಟ್, ಹೀರೋ ಮೋಟೋ ಕೊರ್ಪ್, ವಿಪ್ರೋ, ಅಮೆಜಾನ್ ಕಂಪನಿಗಳು ಕೂಡ ಕ್ಯಾಂಪಸ್ ಇಂಟರ್ವ್ಯೂಗಾಗಿ ಬಂದಿದ್ದವು.

ಅಮೆಜಾನ್ ಎರಡನೇ ಅತಿ ದೊಡ್ಡ ರಿಕ್ರೂಟರ್ ಎನಿಸಿಕೊಂಡಿದ್ದು, ಐವರು ವಿದ್ಯಾರ್ಥಿಗಳಿಗೆ 27.5 ಲಕ್ಷ ರೂಪಾಯಿ ವಾರ್ಷಿಕ ವೇತನದ ಪ್ಯಾಕೇಜ್ ನೀಡಲಿದೆ. ಒಟ್ಟು 51 ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆತಿದ್ದು, 49 ವಿದ್ಯಾರ್ಥಿಗಳು ತಲಾ 7 ಲಕ್ಷ ಹಾಗೂ ಇಬ್ಬರು ತಲಾ 8 ಲಕ್ಷ ಪ್ಯಾಕೇಜ್ ಗಿಟ್ಟಿಸಿಕೊಂಡಿದ್ದಾರೆ.

ಮೇಧಾ ಕುಮಾರಿ ಎನ್ ಐ ಟಿ ಪಾಟ್ನಾದಲ್ಲಿ ಅತಿ ಹೆಚ್ಚು ವೇತನದ ಪ್ಯಾಕೇಜ್ ಪಡೆದ ವಿದ್ಯಾರ್ಥಿನಿ ಎನಿಸಿಕೊಂಡಿದ್ದಾಳೆ. ಎನ್ ಐ ಟಿ ಪಾಟ್ನಾದಿಂದ ಅಡೋಬ್ ಗೆ ಆಯ್ಕೆಯಾದ ಏಕೈಕ ಅಭ್ಯರ್ಥಿ. 2018ರ ಜೂನ್ ನಲ್ಲಿ ಮೇಧಾ ಅಡೋಬ್ ನಲ್ಲಿ ಕಾರ್ಯಾರಂಭ ಮಾಡಲಿದ್ದಾಳೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...