alex Certify
ಕನ್ನಡ ದುನಿಯಾ       Mobile App
       

Kannada Duniya

ನಿರ್ಮಲಾ ಸೀತಾರಾಮನ್ ಈ ವಿಡಿಯೋ ವೈರಲ್

ಮೋದಿ ಸರ್ಕಾರ ಕ್ಯಾಬಿನೆಟ್ ವಿಸ್ತರಣೆಯಲ್ಲಿ ದೇಶದ ರಕ್ಷಣಾ ಹೊಣೆ ನಿರ್ಮಲಾ ಸಿತಾರಾಮನ್ ಹೆಗಲಿಗೇರಿದೆ. ಇಂದಿರಾ ಗಾಂಧಿ ನಂತ್ರ ನಿರ್ಮಲಾ ಸೀತಾರಾಮನ್ ಎರಡನೇ ಮಹಿಳಾ ರಕ್ಷಣಾ ಸಚಿವೆಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿರ್ಮಲಾ ಸೀತಾರಾಮನ್ ಗೆ ಶುಭಕೋರಲಾಗ್ತಿದೆ. ಈ ಮಧ್ಯೆ ನಿರ್ಮಲಾ ಸೀತಾರಾಮನ್ ಅವರ ವಿಡಿಯೋವೊಂದು ವೈರಲ್ ಆಗಿದೆ.

ನಿರ್ಮಲಾ ಸೀತಾರಾಮನ್ ತಾಯಿ ಜೊತೆ ಕುಳಿತು ಮಾವಿನ ಕಾಯಿ ಉಪ್ಪಿನಕಾಯಿ ಮಾಡ್ತಿರುವ ವಿಡಿಯೋ ಇದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಯೂಟ್ಯೂಬ್ ನಿಂದ ಪಡೆಯಲಾಗಿದೆ. ವಿಡಿಯೋವನ್ನು 2013ರಲ್ಲಿ ನಿರ್ಮಲಾ ಸೀತಾರಾಮನ್ ಪತಿ ಪರಕಾಲ ಪ್ರಭಾಕರ್ ಅಪ್ಲೋಡ್ ಮಾಡಿದ್ದರು.

ಈ ವಿಡಿಯೋದಲ್ಲಿ ರುಚಿರುಚಿ ಉಪ್ಪಿನಕಾಯಿ ಹೇಗೆ ಮಾಡೋದು ಎಂಬುದನ್ನು ತೋರಿಸಲಾಗಿದೆ. ಆಂಧ್ರಪ್ರದೇಶದಲ್ಲಿ ಉಪ್ಪಿನಕಾಯಿಗೆ ಅವಕಾಯ ಎಂದು ಕರೆಯಲಾಗುತ್ತದೆ. ಸೀತಾರಾಮನ್ ಈ ವಿಡಿಯೋಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬರ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...