alex Certify
ಕನ್ನಡ ದುನಿಯಾ       Mobile App
       

Kannada Duniya

ನೈಟಿ ಧರಿಸುವ ಮಹಿಳೆಯರಿಗೆ ಶಾಕಿಂಗ್ ನ್ಯೂಸ್

designer-nighty

ಥಾಣೆ: ನೈಟಿ ಸಾಮಾನ್ಯವಾಗಿ ಹೆಣ್ಣುಮಕ್ಕಳ ಅಚ್ಚುಮೆಚ್ಚಿನ ಉಡುಪುಗಳಲ್ಲೊಂದು. ಬಹುತೇಕ ಮಹಿಳೆಯರು ಮನೆಯಲ್ಲಿದ್ದ ಸಂದರ್ಭದಲ್ಲಿ ನೈಟಿ ಧರಿಸುತ್ತಾರೆ. ಬಹುತೇಕರು ನೈಟಿಯನ್ನು ರಾತ್ರಿ ವೇಳೆ ಮಾತ್ರ ಹಾಕದೇ ಹಗಲಿನಲ್ಲೂ ಹಾಕುತ್ತಾರೆ.

ಕೆಲವರಂತೂ, ನೈಟಿಯಲ್ಲೇ ಹೊರಗಡೆ ಸುತ್ತಾಡುತ್ತಾರೆ. ದೇವಾಲಯಗಳಿಗೂ ಹೋಗುತ್ತಾರೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕೋಪರ್ ನಲ್ಲಿರುವ ದೇವಾಲಯಗಳಲ್ಲಿ ನೈಟಿ ಧರಿಸಿ ಬರುವ ಮಹಿಳೆಯರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಮಹಿಳೆಯರು ನೈಟಿ ಧರಿಸಿ ಬರಬಾರದೆಂದು ಕೋಪರ್ ನಲ್ಲಿರುವ ಗಾಂವ್ ದೇವಿ ದೇವಸ್ಥಾನ, ಮಹಾದೇವ ದೇವಾಲಯ ಮತ್ತು ಹನುಮಾನ್ ಮಂದಿರದ ಎದುರು ಸೂಚನಾ ಫಲಕ ಹಾಕಲಾಗಿದೆ ಎಂದು ಹೇಳಲಾಗಿದೆ.

ಹೆಣ್ನುಮಕ್ಕಳು ಸಾಮಾನ್ಯವಾಗಿ ಮನೆಯಲ್ಲಿದ್ದ ಸಂದರ್ಭದಲ್ಲಿ ನೈಟಿ ಧರಿಸಿರುತ್ತಾರೆ. ನೈಟಿ ಧರಿಸಿಕೊಂಡು ಅಡುಗೆ ಮೊದಲಾದ ಕೆಲಸ ಮಾಡುತ್ತಾರೆ. ಅದೇ ನೈಟಿಯಲ್ಲೇ ದೇವಾಲಯಕ್ಕೆ ಬಂದರೆ ಸರಿಯಾಗುವುದಿಲ್ಲ. ದೇವಾಲಯಗಳಿಗೆ ನೈಟಿ ಹಾಕಿಕೊಂಡು ಬರಬಾರದೆಂದು ದೇವಾಲಯಗಳ ಆಡಳಿತ ಮಂಡಳಿ ಪ್ರಮುಖರೂ ಆಗಿರುವ, ಶಿವಸೇನೆ ಕಾರ್ಪೋರೇಟರ್ ರಮೇಶ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...