alex Certify
ಕನ್ನಡ ದುನಿಯಾ       Mobile App
       

Kannada Duniya

ನಿದಾ ಖಾನ್ ತ್ರಿವಳಿ ತಲಾಖ್ ಅಮಾನ್ಯ

ತ್ರಿವಳಿ ತಲಾಖ್ ಹಾಗೂ ಹಲಾಲಾ ಪೀಡಿತ ಮಹಿಳೆಯರ ವಿರುದ್ಧ ಧ್ವನಿ ಎತ್ತಿದ್ದ ಬರೇಲಿಯ ಪ್ರತಿಷ್ಠಿತ ಆಲಾ ಹಜರತ್ ಕುಟುಂಬದ ಸೊಸೆ ನಿದಾ ಖಾನ್ ಗೆ ಭರ್ಜರಿ ಜಯ ಸಿಕ್ಕಿದೆ. ಜಿಲ್ಲಾ ನ್ಯಾಯಾಲಯವೊಂದು ಮಂಗಳವಾರ ನಿದಾ ಖಾನ್ ಗೆ ಪತಿ ನೀಡಿದ್ದ ತ್ರಿವಳಿ ತಲಾಖನ್ನು ಅಮಾನ್ಯಗೊಳಿಸಿದೆ.

ನಿದಾ ಖಾನ್ ಪತಿ ಶಿರಾನ್ ರಜಾಕ್ ವಿರುದ್ಧ ಕೌಟುಂಬಿಕ ಹಿಂಸಾಚಾರದ ದೂರು ದಾಖಲಾಗಿದ್ದು, ಇದ್ರ ವಿಚಾರಣೆ ಮುಂದುವರೆದಿದೆ ಎಂದು ಕೋರ್ಟ್ ಹೇಳಿದೆ. ನಿದಾ ಮುಸ್ಲಿಂ ಧರ್ಮದ ವಿರುದ್ಧವಾಗಿ ನಡೆದುಕೊಂಡಿದ್ದಾಳೆಂಬ ಕಾರಣಕ್ಕೆ ಎರಡು ದಿನಗಳ ಹಿಂದಷ್ಟೇ ನಿದಾ ವಿರುದ್ಧ ಫತ್ವಾ ಹೊರಡಿಸಲಾಗಿತ್ತು.

ನಿದಾ ಖಾನ್ ಗೆ ಯಾವುದೇ ಸಹಾಯ ಮಾಡಬಾರದೆಂದು ಫತ್ವಾದಲ್ಲಿ ಹೇಳಲಾಗಿತ್ತು. ಈ ಮಧ್ಯೆ ತನ್ನ ವಿರುದ್ಧ ದಾಖಲಾಗಿರುವ ಕೌಟುಂಬಿಕ ಹಿಂಸಾಚಾರ ಪ್ರಕಣವನ್ನು ವಜಾಗೊಳಿಸಬೇಕು. ತಲಾಖ್ ನೀಡಿದ ನಂತ್ರ ನಿದಾಗೆ ಪರಿಹಾರ ನೀಡಿದ್ದೆ ಎಂದು ಪತಿ ಶಿರಾನ್ ಹೇಳಿದ್ದ. ಶಿರಾನ್ ಅರ್ಜಿ ವಜಾಗೊಳಿಸಿದ ಕೋರ್ಟ್, ತಲಾಖ್ ಅಮಾನ್ಯ ಮಾಡಿದೆ.

ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖ ಮಾಡಿದ ಕೋರ್ಟ್, ಈ ತೀರ್ಪು ನೀಡುವ ವೇಳೆ ಹಿಂದೂ ಮಹಿಳೆ, ಮುಸ್ಲಿಂ ಮಹಿಳೆ ಎಂಬ ವ್ಯತ್ಯಾಸ ಕಾನೂನಿಗಿಲ್ಲ. ಶಿರಾನ್ ವಿರುದ್ಧ ಕೌಟುಂಬಿಕ ಹಿಂಸೆ ಕೇಸ್ ಮುಂದುವರೆಯಲಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...