alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ಶ್ರೀನಗರದ ಸೆಂಟ್ರಲ್ ಜೈಲ್ ನಲ್ಲಿತ್ತು ಪಾಕ್ ಧ್ವಜ

ಶ್ರೀನಗರದ ಸೆಂಟ್ರಲ್ ಜೈಲಿನಲ್ಲಿದ್ದ ಭಯೋತ್ಪಾದಕನೊಬ್ಬನನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ತಪ್ಪಿಸಿಕೊಂಡು ಪರಾರಿಯಾದ ಘಟನೆ ಬಳಿಕ ಜೈಲಿನ ಕಾರ್ಯಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಸೋಮವಾರದಂದು ದಾಳಿ ಮಾಡಿದ ವೇಳೆ ಅಲ್ಲಿ ಸಿಕ್ಕ ವಸ್ತುಗಳನ್ನು ಕಂಡು ದಂಗಾಗಿದ್ದಾರೆ.

ರಾಷ್ಟ್ರೀಯ ತನಿಖಾ ದಳದ 20 ಮಂದಿ ಅಧಿಕಾರಿಗಳ ತಂಡ, ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಕೇಂದ್ರ ಸಶಸ್ತ್ರ ಮೀಸಲು ಪೊಲೀಸ್ ಪಡೆ ಹಾಗೂ ಎನ್.ಎಸ್.ಜಿ. ಗಾರ್ಡ್ ಗಳ ಸಹಕಾರದೊಂದಿಗೆ ಸೆಂಟ್ರಲ್ ಜೈಲ್ ಮೇಲೆ ದಾಳಿ ನಡೆಸಿದ್ದು, ತಪಾಸಣೆ ವೇಳೆ ಫೋನ್, ಐಪಾಡ್, ಸಿಮ್ ಕಾರ್ಡ್ ಗಳು, ಪಾಕಿಸ್ತಾನದ ಧ್ವಜ ಹಾಗೂ ಜೆಹಾದ್ ಗೆ ಕುರಿತ ಪುಸ್ತಕಗಳು ಪತ್ತೆಯಾಗಿದೆ.

ಗಡಿಯಲ್ಲಿ ಸೆರೆ ಸಿಕ್ಕ ಭಯೋತ್ಪಾದಕರನ್ನು ಈ ಜೈಲಿನಲ್ಲಿರಿಸಲಾಗಿದ್ದು, ಬಿಗಿ ಭದ್ರತೆಯ ನಡುವೆಯೂ ಈ ವಸ್ತುಗಳು ಒಳಗೆ ಬಂದಿದ್ದು ಹೇಗೆ ಎಂಬ ಪ್ರಶ್ನೆ ಈಗ ಅಧಿಕಾರಿಗಳನ್ನು ಕಾಡತೊಡಗಿದೆ. ಪೊಲೀಸರ ವಶದಲ್ಲಿದ್ದಾಗಲೇ ತಪ್ಪಿಸಿಕೊಂಡಿದ್ದ ಲಷ್ಕರ್ ಇ ತಯ್ಯೆಬ್ ನ ಉಗ್ರ ನವೇದ್, ಜೈಲಿನಲ್ಲಿರುವಾಗಲೇ ಹೊರಗಿರುವ ತನ್ನ ಸಹಚರರೊಂದಿಗೆ ಸಂಪರ್ಕ ಸಾಧಿಸಿ ಸಂಚು ರೂಪಿಸಿರಬಹುದೆಂಬ ವಾದಕ್ಕೆ ಈಗ ಪುಷ್ಟಿ ದೊರೆತಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...