alex Certify
ಕನ್ನಡ ದುನಿಯಾ       Mobile App
       

Kannada Duniya

ನವ ವಿವಾಹಿತರಿಗೆ ಕಾಂಡೋಮ್ ಉಡುಗೊರೆ

wedding_6

ಉತ್ತರ ಪ್ರದೇಶ ಸರ್ಕಾರ ನವ ವಿವಾಹಿತರಿಗೆ ಉಡುಗೊರೆ ಕೊಡ್ತಿದೆ. ಅದೇನ್ ಗೊತ್ತಾ? ಕಾಂಡೋಮ್. ಹೌದು ಕುಟುಂಬ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಲು ಕಾಂಡೋಮ್ ಹಾಗೂ ಗರ್ಭನಿರೋಧಕ ಮಾತ್ರೆಗಳುಳ್ಳ ಕಿಟ್ ಅನ್ನು ನವಜೋಡಿಗೆ ಕೊಡಲಾಗುತ್ತಿದೆ.

ಈ ಕಿಟ್ ನಲ್ಲಿ ಆರೋಗ್ಯ ಇಲಾಖೆಯ ಪತ್ರವೊಂದನ್ನು ಇಡಲಾಗುತ್ತದೆ. ಕುಟುಂಬ ಯೋಜನೆಯ ಮಹತ್ವ, ಮಕ್ಕಳ ಮಧ್ಯೆ ಎಷ್ಟು ಅಂತರವಿರಬೇಕು, ಜನಸಂಖ್ಯಾ ನಿಯಂತ್ರಣ ಇವುಗಳ ಬಗ್ಗೆ ಪತ್ರದ ಮೂಲಕ ಅರಿವು ಮೂಡಿಸಲಾಗುತ್ತಿದೆ.

ಜುಲೈ 11ರಂದು ವಿಶ್ವ ಜನಸಂಖ್ಯಾ ದಿನಾಚರಣೆಯಿದ್ದು, ಅಂದು ‘ಮಿಷನ್ ಪರಿವಾರ್ ವಿಕಾಸ್’ ಹೆಸರಲ್ಲಿ ಈ ಯೋಜನೆಯನ್ನು ಉದ್ಘಾಟಿಸಲಾಗುತ್ತಿದೆ. ಕಾಂಡೋಮ್, ಗರ್ಭನಿರೋಧಕ ಮಾತ್ರೆಯ ಜೊತೆಗೆ ಟವೆಲ್, ಹ್ಯಾಂಡ್ ಕರ್ಚೀಫ್, ನೇಲ್ ಕಟ್ಟರ್, ಹಣಿಗೆ, ಕನ್ನಡಿಯನ್ನು ಕೂಡ ವಧು- ವರರಿಗೆ ಕೊಡಲಾಗುತ್ತದೆ.

ಈ ಕಿಟ್ ಅನ್ನು ನವಜೋಡಿಗೆ ತಲುಪಿಸುವ ಜವಾಬ್ಧಾರಿ ಆಶಾ ಕಾರ್ಯಕರ್ತೆಯರದ್ದು. ವಧು- ವರರಿಗೆ ಯಾವುದೇ ಮಾಹಿತಿ ಬೇಕಾದಲ್ಲಿ ಅವರಿಂದ ಪಡೆದುಕೊಳ್ಳಬಹುದು. ಹೊಸ ಯೋಜನೆ ಬಗ್ಗೆ ವಧು-ವರರ ಪ್ರತಿಕ್ರಿಯೆ ಹೇಗಿರುತ್ತೆ ಅನ್ನೋದನ್ನು ಕೂಡ ಸರ್ಕಾರ ಗಣನೆಗೆ ತೆಗೆದುಕೊಳ್ಳಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...