alex Certify
ಕನ್ನಡ ದುನಿಯಾ       Mobile App
       

Kannada Duniya

ಬಾತ್ ರೂಂನಲ್ಲಿ ಈ ಸ್ಥಿತಿಯಲ್ಲಿದ್ಲು ನವ ವಿವಾಹಿತೆ

ನವ ವಿವಾಹಿತೆ ಬಾತ್ ರೂಂನಿಂದ ಬಹಳ ಸಮಯವಾದ್ರೂ ಹೊರಗೆ ಬಂದಿರಲಿಲ್ಲ. ಬಾಗಿಲು ಒಡೆದು ನೋಡಿದ ಗಂಡನ ಮನೆಯವರು ಒಳಗಿನ ಸ್ಥಿತಿ ನೋಡಿ ದಂಗಾಗಿದ್ದರು. ಬಾತ್ ರೂಂನಲ್ಲಿ ನವವಿವಾಹಿತೆ ಹೆಣವಾಗಿದ್ದಳು.

ಘಟನೆ ನಡೆದಿರುವುದು ರಾಜಸ್ತಾನದ ಸುಜಾಂಗದಲ್ಲಿ. ನಾಲ್ಕು ದಿನಗಳ ಹಿಂದಷ್ಟೇ ಮನಿಷಾ ಮದುವೆಯಾಗಿತ್ತು. ಭಾನುವಾರ ಮನಿಷಾ ಸ್ನಾನಕ್ಕೆ ಹೋದವಳು ಎಷ್ಟು ಸಮಯವಾದ್ರೂ ಹೊರಗೆ ಬರಲಿಲ್ಲ. ಯಾವುದೇ ಶಬ್ದ ಕೂಡ ಬರ್ತಿರಲಿಲ್ಲ. ಮನೆಯವರು ಬಾಗಿಲು ಒಡೆದು ನೋಡಿದ್ದಾರೆ. ಒಳಗೆ ಮನಿಷಾ ಹೆಣವಾಗಿ ಬಿದ್ದಿದ್ದನ್ನು ನೋಡಿ ದಂಗಾಗಿದ್ದಾರೆ.

ಮನಿಷಾ ಸ್ನಾನ ಮಾಡುವ ವೇಳೆ ಗ್ಯಾಸ್ ಗೀಸರ್ ಹಾಕಲಾಗಿತ್ತು. ಅದ್ರಿಂದ ಅನಿಲ ಸೋರಿಕೆಯಾಗಿದೆ. ಬಾತ್ ರೂಂನಲ್ಲಿ ಗಾಳಿಯಾಡಲು ಅವಕಾಶವಿಲ್ಲದ ಕಾರಣ ಮನಿಷಾ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...