alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾದ 13 ದಿನಕ್ಕೆ ಪತಿಯ ಹತ್ಯೆ ಮಾಡಿದ್ಲು ಪತ್ನಿ

ಮಹಾರಾಷ್ಟ್ರದ ಪುಣೆಯಲ್ಲಿ ಮದುವೆಯಾಗಿ ಹನಿಮೂನ್ ಗೆ ಬಂದಿದ್ದ ಪತಿಗೆ ಯಮಲೋಕ ತೋರಿಸಿದ್ದಾಳೆ ಪತ್ನಿ. ಕೊಲೆ ಪ್ರಕರಣ ಹೊರ ಬರ್ತಿದ್ದಂತೆ ಪೊಲೀಸರು ದಂಗಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತ್ನಿ ಹಾಗೂ ಆಕೆ ಪ್ರೇಮಿಯನ್ನು ಬಂಧಿಸಿದ್ದಾರೆ.

ಪುಣೆ ನಿವಾಸಿ ಆನಂದ್ ಕಾಂಬ್ಳೆಯನ್ನು ಮಹಾಬಲೇಶ್ವರದಲ್ಲಿ ಶನಿವಾರ ಹತ್ಯೆ ಮಾಡಲಾಗಿದೆ. ಮಾರಣಾಂತಿಕ ಆಯುಧಗಳಿಂದ ದಾಳಿ ನಡೆಸಿ ಕೊಲೆ ಮಾಡಲಾಗಿದೆ. ಆರಂಭದಲ್ಲಿ ದೀಕ್ಷಾ ಹಾಗೂ ಆಕೆ ಪ್ರೇಮಿ, ದರೋಡೆಕೋರರು ಹತ್ಯೆ ಮಾಡಿದ್ದಾರೆಂದು ಕಥೆ ಕಟ್ಟಿದ್ದಾರೆ. ಆದ್ರೆ ಕೆಲವೇ ಗಂಟೆಗಳಲ್ಲಿ ಅವ್ರ ಬಣ್ಣ ಬಯಲಾಗಿದೆ.

ಮೇ 20ರಂದು ಆನಂದ್ ಮದುವೆ ದೀಕ್ಷಾ ಜೊತೆಗಾಗಿತ್ತು. ದೀಕ್ಷಾ, ಆನಂದ್ ಹಾಗೂ ಆಕೆ ಸ್ನೇಹಿತ ನಿಖಿಲ್ ಆತನ ಪತ್ನಿ ಮಹಾಬಲೇಶ್ವರಕ್ಕೆ ಬಂದಿದ್ದರು. ದಾರಿ ಮಧ್ಯೆ ಕಾರು ನಿಲ್ಲಿಸುವಂತೆ ಹೇಳಿದ ದೀಕ್ಷಾ, ಆನಂದ್ ನನ್ನು ಕಾರಿನಿಂದ ಕೆಳಗಿಳಿಸಿದ್ದಾಳೆ. ಅಲ್ಲಿಗೆ ಬಂದ ದುಷ್ಕರ್ಮಿಗಳಿಬ್ಬರು ಆನಂದ್ ಮೇಲೆ ಹಲ್ಲೆ ನಡೆಸಿದ್ದಾರೆ.

ಆನಂದ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಪ್ರಜ್ಞೆ ತಪ್ಪಿದ್ದ ದೀಕ್ಷಾ ಸುಳ್ಳು ಕಥೆ ಹೇಳಿದ್ದಾಳೆ. ಆದ್ರೆ ನಿಖಿಲ್ ವಿಚಾರಣೆ ಮಾಡಿದಾಗ ದೀಕ್ಷಾಗೆ ಪ್ರೇಮಿ ಇರುವ ಸಂಗತಿ ಗೊತ್ತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...