alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಚದ ಕಾರಣಕ್ಕೆ ಹಾರಿ ಹೋಯ್ತು ಮಹಿಳೆ ಪ್ರಾಣ

r-g-kar-medical-collegeಕೋಲ್ಕತ್ತಾದಲ್ಲೊಂದು ಅಮಾನುಷ ಘಟನೆ ನಡೆದಿದೆ. ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಮಹಿಳೆಯೊಬ್ಬಳು ಮಗುವನ್ನು ಹೆತ್ತ ಬಳಿಕ ಆಕೆಯನ್ನು ವಾರ್ಡ್ ಗೆ ಶಿಫ್ಟ್ ಮಾಡಿದ್ದು, ಈ ವೇಳೆ 1 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟ ನರ್ಸ್, ಅದನ್ನು ನೀಡದ ಕಾರಣ ವಾಗ್ವಾದಕ್ಕೆ ಇಳಿದಿದ್ದು, ಮಹಿಳೆಯನ್ನು ತಳ್ಳಿದ ಪರಿಣಾಮ ಕೆಳಕ್ಕೆ ಬಿದ್ದ ಆಕೆ ಸಾವನ್ನಪ್ಪಿರುವ ಘಟನೆ ನಡೆದಿದೆ.

ಭಾನುವಾರದಂದು ಕೋಲ್ಕತ್ತಾದ ಆರ್.ಜಿ. ಕಾರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ರೇಷ್ಮಾ ಬೀಬಿ ಎಂಬಾಕೆ ಮಗುವನ್ನು ಹೆತ್ತ ಬಳಿಕ ಆಕೆಯನ್ನು ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ನರ್ಸ್, ಸಾವಿರ ರೂ. ನೀಡಲು ಬೇಡಿಕೆ ಇಟ್ಟಿದ್ದಾಳೆ. ರೇಷ್ಮಾ ಬೀಬಿ ಪತಿ ಹಬೀಬುರ್ ಲಸ್ಕರ್ ಬಳಿ ಕೇವಲ 125 ರೂ. ಗಳಿದ್ದು, ಅದನ್ನೇ ನರ್ಸ್ ಗೆ ನೀಡಲು ಮುಂದಾಗಿದ್ದಾನೆ.

ಅದನ್ನು ಸ್ವೀಕರಿಸಲು ನಿರಾಕರಿಸಿದ ನರ್ಸ್ ವಾಗ್ವಾದಕ್ಕಿಳಿದಿದ್ದು, ಆಗ ರೇಷ್ಮಾ ಬೀಬಿ, ನರ್ಸ್ ಹಾಗೂ ಗಂಡನ ಮಧ್ಯೆ ನಡೆಯುತ್ತಿದ್ದ ಮಾತಿನ ಚಕಮಕಿಯನ್ನು ನಿಲ್ಲಿಸಲು ಹೋಗಿದ್ದಾಳೆ. ಸಿಟ್ಟಿಗೆದ್ದ ನರ್ಸ್ ಆಕೆಯನ್ನು ತಳ್ಳಿದ್ದು, ಮೊದಲೇ ನಿತ್ರಾಣಳಾಗಿದ್ದ ರೇಷ್ಮಾ ಬೀಬಿ ಕುಸಿದು ಬಿದ್ದಿದ್ದಾಳೆ. ತಕ್ಷಣಕ್ಕೆ ಚಿಕಿತ್ಸೆಯನ್ನೂ ನೀಡಲಿಲ್ಲವೆನ್ನಲಾಗಿದ್ದು, ಮಹಿಳೆ ಮೃತಪಟ್ಟಿದ್ದಾಳೆ. ಇದಾದ ನಂತರ ರೊಚ್ಚಿಗೆದ್ದ ಮೃತ ಮಹಿಳೆಯ ಕುಟುಂಬಸ್ಥರು ಪ್ರತಿಭಟನೆ ಆರಂಭಿಸಿದ್ದು, ಇತರೆ ರೋಗಿಗಳ ಸಂಬಂಧಿಕರೂ ಜೊತೆಗೂಡಿದ್ದಾರೆ. ಈ ಆಸ್ಪತ್ರೆಯಲ್ಲಿ ಎಲ್ಲದಕ್ಕೂ ಹಣದ ಬೇಡಿಕೆಯಿಡುತ್ತಾರೆ. ನೀಡದಿದ್ದರೆ ಚಿಕಿತ್ಸೆ ನಿರಾಕರಿಸುತ್ತಾರೆಂದು ಆರೋಪಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಇದೀಗ ಆಸ್ಪತ್ರೆಯ ಕರ್ಮಕಾಂಡ ಕುರಿತು ತನಿಖೆಗೆ ಆದೇಶಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...