alex Certify
ಕನ್ನಡ ದುನಿಯಾ       Mobile App
       

Kannada Duniya

ಅಚ್ಚರಿ: ಕೋಮಾ ತಲುಪಿದ್ದ ತಾಯನ್ನು ಬದುಕಿಸಿದ ನವಜಾತ ಶಿಶು

ದೇವರ ನಾಡು ಕೇರಳದಲ್ಲಿ ಒಂದು ಅಚ್ಚರಿಯವ ವಿದ್ಯಮಾನ ನಡೆದಿದೆ. ಕೋಮಾ ಸ್ಥಿತಿ ತಲುಪಿದ್ದ ತಾಯಿಯನ್ನು ನವಜಾತ ಶಿಶು ಬದುಕಿಸಿದ ಘಟನೆ ನಡೆದಿದೆ.

ಕೊಟ್ಟಾಯಂನ ವಜೂರ್ನನಿವಾಸಿಯಾಗಿದ್ದ ಬೆಟೆನಾ ಮೂರು ತಿಂಗಳ ಗರ್ಭಿಣಿಯಾಗಿರುವಾಗ್ಲೇ ಅನಾರೋಗ್ಯದಿಂದಾಗಿ ಕೋಮಾ ಸ್ಥಿತಿಗೆ ಜಾರಿಬಿಟ್ಟಿದ್ದರು . ಮೆದುಳಿನಲ್ಲಿ ಕಾಣಿಸಿಕೊಂಡ ಸಮಸ್ಯೆಯಿಂದಾಗಿ ಬೆಟೆನಾ ಜನವರಿ ತಿಂಗಳಿನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಆನಂತರ ಬೆಟೆನಾ ಆರೋಗ್ಯ ಸ್ಥಿತಿ ಬಿಗಡಾಯಿಸಿ ಕೋಮಾಗೆ ಜಾರಿಬಿಟ್ಟಿದ್ದರು. ಜೂನ್ 14ರಂದು ಶಸ್ತ್ರ ಚಿಕಿತ್ಸೆಯ ಮೂಲಕ ಅವರಿಗೆ ಹೆರಿಗೆ ಮಾಡಲಾಯ್ತು. ಆನಂತರದಲ್ಲಿ ನಿಧಾನವಾಗಿ ಬೆಟೆನಾ ಕೋಮಾಸ್ಥಿತಿಯಿಂದ ಹೊರಬರುವ ಸೂಚನೆಗಳು ಸಿಕ್ಕವು. ವೈದ್ಯರ ನೆರವಿನಿಂದ ಮಗುವಿಗೆ ಎದೆ ಹಾಲುಣಿಸುವ ಸಂದರ್ಭದಲ್ಲಿ ಬೆಟೆನಾ ಕೋಮಾದಿಂದ ಹೊರಬಂದರು. ಮಗುವಿನ ಅಳು ಅವರನ್ನ ಪ್ರಾಣಾಪಾಯದಿಂದ ಪಾರುಮಾಡಿದೆ.

ಸದ್ಯಕ್ಕೆ ಮಗುವಿನ ಅಳುವನ್ನು ಅರ್ಥ ಮಾಡಿಕೊಂಡು ಹಾಲುಣಿಸುವಷ್ಟರ ಮಟ್ಟಿಗೆ ಬೆಟೆನಾ ಚೇತರಿಸಿಕೊಂಡಿದ್ದಾರೆ. ಮಗುವಿಗೆ ಎಲ್ವಿನಾ ಎಂದು ಬೆಟನಾ, ಅನೂಪ್ ದಂಪತಿ ನಾಮಕರಣ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...