alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಳಚೆ ಪೈಪ್ ನಲ್ಲಿ ಸಿಕ್ತು ನವಜಾತ ಶಿಶು

ಸ್ವಾತಂತ್ರ್ಯ ದಿನದಂದು ಚೆನ್ನೈನಲ್ಲಿ ಯಾತನಾಮಯ ಘಟನೆಯೊಂದು ನಡೆದಿದೆ. ಎಲ್ಲರೂ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿದ್ದರೆ ನವಜಾತ ಶಿಶುವೊಂದು ಕೊಳಚೆ ಗುಂಡಿಯಲ್ಲಿ ಸಿಲುಕಿಕೊಂಡಿತ್ತು. ಚೆನ್ನೈನ ವಲ್ಸಾರಕ್ಕಾಮ್ ಪ್ರದೇಶದಲ್ಲಿರುವ ಗೀತಾ ಎಂಬುವವರಿಗೆ ನವಜಾತ ಶಿಶು ಅಳುವ ಶಬ್ಧ ಕೇಳಿದೆ. ಆದ್ರೆ ಮಗು ಎಲ್ಲೂ ಕಾಣಲಿಲ್ಲ. ಗಮನವಿಟ್ಟು ಕೇಳಿದಾಗ ಕೊಳಚೆ ಗುಂಡಿಯಿಂದ ಮಗುವಿನ ಅಳು ಕೇಳಿ ಬರ್ತಿತ್ತು.

ಕೊಳಚೆ ಗುಂಡಿಯ ಪೈಪ್ ಒಳಗೆ ಕೈ ಹಾಕಿದ ಗೀತಾ ಆಶ್ಚರ್ಯಗೊಂಡಿದ್ದಾರೆ. ನವಜಾತ ಶಿಶುವೊಂದು ಕೈಗೆ ಸಿಕ್ಕಿದೆ. ಮಗುವಿನ ಹೊಕ್ಕಳು ಬಳ್ಳಿ ಕೂಡ ಕತ್ತರಿಸಿರಲಿಲ್ಲ. ಮಗು ನೋಡಿ ನೆರೆದಿದ್ದವರೆಲ್ಲ ಕಂಗಾಲಾಗಿದ್ದಾರೆ. ಮಗುವನ್ನು ಗೀತಾ ಚೆನ್ನೈನ ಏಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ.

ಮಗು ಆರೋಗ್ಯದಲ್ಲಿ ಸುಧಾರಣೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿಗೆ ಸ್ವಾತಂತ್ರಂ ಎಂದು ಹೆಸರಿಡಲು ಗೀತಾ ಮುಂದಾಗಿದ್ದಾರೆ. ಸ್ವಾತಂತ್ರ್ಯ ದಿನದಂದು ಮಗು ಸಿಕ್ಕಿದ್ದು ಖುಷಿ ವಿಷ್ಯವೆಂದು ಗೀತಾ ಹೇಳಿದ್ದಾರೆ. ಗೀತಾ ಕೊಳಚೆ ಪೈಪ್ ನಿಂದ ಮಗು ತೆಗೆಯುತ್ತಿರುವ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...