alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ವರ್ಷದ ಪಾರ್ಟಿಗೂ ಮುನ್ನ 814 ಕೆಜಿ ಗಾಂಜಾ ವಶ

ganzha

ಹೊಸ ವರ್ಷಕ್ಕೆ ಕ್ಷಣಗಣನೆ ಶುರುವಾಗಿದೆ. ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲು ಜನರು ಸಿದ್ಧತೆ ನಡೆಸ್ತಿದ್ದಾರೆ. ನಶೆಯಲ್ಲಿ ತೇಲಾಡುವ ತಯಾರಿ ಜೋರಾಗಿ ಸಾಗಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯ ಹೈದ್ರಾಬಾದ್ ನಲ್ಲಿ ಭರ್ಜರಿ ಬೇಟೆಯಾಡಿದೆ. 814 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.

270 ಪ್ಯಾಕೆಟ್ ಗಳಲ್ಲಿ ಗಾಂಜಾ ತುಂಬಿ ಲಾರಿಯಲ್ಲಿ ಸಾಗಿಸ್ತಾ ಇದ್ದ ವೇಳೆ ಸೂಕ್ತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಮಾಲನ್ನು ವಶಕ್ಕೆ ಪಡೆದಿದ್ದಾರೆ. ಇದಕ್ಕಿಂತ ಮೊದಲು 132 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿತ್ತು. ಈ ಗಾಂಜಾ ಹೊಸ ವರ್ಷದ ಪಾರ್ಟಿಗಾಗಿ ಸಾಗಿಸಲಾಗ್ತಾ ಇತ್ತು ಎನ್ನಲಾಗಿದೆ.

270 ಪ್ಯಾಕೆಟ್ ಗಾಂಜಾವನ್ನು ಲಾರಿಯಲ್ಲಿ ಹಾಗೂ 20 ಪ್ಯಾಕೆಟ್ ಗಾಂಜಾವನ್ನು ತವೇರಾ ಮತ್ತು 60 ಪ್ಯಾಕೆಟ್ ಫಾರ್ಮ್ ಹೌಸ್ ನಲ್ಲಿ ವಶಕ್ಕೆ ಪಡೆಯಲಾಗಿದೆ. ಗಾಂಜಾ ಬೆಲೆ ಸುಮಾರು 81.44 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...