alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಶವವನ್ನು ಹೆಗಲ ಮೇಲೆ ಹೊತ್ತಿದ್ದವನ ಸ್ಥಿತಿ ಈಗ ಹೇಗಿದೆ ಗೊತ್ತಾ…?

ಹೊಸ ಬೈಕ್, ಹೊಸ ಹೆಂಡ್ತಿ, ಹೊಸ ಮನೆ…. ಬದಲಾಗಿದೆ ಬದುಕು. ಇದನ್ನು ಮೊದಲೇ ಹೇಳಿದ್ರೇ ನಿಮಗೆ ಗೊತ್ತಾಗಲಿಕ್ಕಿಲ್ಲ. ಅಂದ ಹಾಗೇ, ಒಡಿಶಾದಲ್ಲಿ ಅಂಬುಲೆನ್ಸ್ ಸಿಗದೇ ಪತ್ನಿಯ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದ ವ್ಯಕ್ತಿಯ ಬದಲಾದ ಬದುಕಿನ ಚಿತ್ರಣವಿದು.

ಒಡಿಶಾದ ಕಲಹಂಡಿ ಜಿಲ್ಲೆಯ ಬುಡಕಟ್ಟು ಸಮುದಾಯಕ್ಕೆ ಸೇರಿದ ದಾನಾ ಮಾಂಜಿ ತನ್ನ ಮಗಳೊಂದಿಗೆ ಪತ್ನಿಯ ಶವವನ್ನು ಹೊತ್ತುಕೊಂಡು ಪಟ್ಟಣದ ಆಸ್ಪತ್ರೆಯಿಂದ ಸ್ವಗ್ರಾಮಕ್ಕೆ 10 ಕಿಲೋ ಮೀಟರ್ ದೂರ ಸಾಗಿದ್ದರು.

ಈ ದೃಶ್ಯ ದೇಶದ ಜನರ ಮನ ಕಲಕಿತ್ತು. ದೇಶ ಮಾತ್ರವಲ್ಲದೇ, ಜಗತ್ತಿನಾದ್ಯಂತ ಸುದ್ದಿಯಾಗಿತ್ತು. ಹೆಗಲ ಮೇಲೆ ಪತ್ನಿಯ ಶವ ಹೊತ್ತು ಸಾಗಿದ ದಾನಾ ಮಾಂಜಿಗೆ ನೆರವಿನ ಮಹಾಪೂರವೇ ಹರಿದುಬಂದಿತ್ತು. ಅಂದ ಹಾಗೇ ದಾನಾ ಮಾಂಜಿ ಈಗ ಹೇಗಾಗಿದ್ದಾರೆ ನೋಡಿ.

ಪತ್ನಿಯ ನಿಧನದ ಬಳಿಕ ಕಂಗೆಟ್ಟಿದ್ದ ಆತನ ಬಾಳಲ್ಲಿ ಬದಲಾವಣೆ ಗಾಳಿ ಬೀಸಿದೆ. ಆತನ ಮೂವರು ಹೆಣ್ಣು ಮಕ್ಕಳಿಗೆ ಭುವನೇಶ್ವರದ ಶಿಕ್ಷಣ ಸಂಸ್ಥೆಯೊಂದು ವಸತಿಯುತ ಶಾಲೆಯಲ್ಲಿ ಉಚಿತವಾಗಿ ಶಿಕ್ಷಣ ನೀಡುತ್ತಿದೆ. ಬಹರೇನ್ ಪ್ರಧಾನಿ ಮಾಂಜಿಗೆ 9 ಲಕ್ಷ ರೂ. ನೆರವು ನೀಡಿದ್ದರು. ಇದೇ ರೀತಿ ಅವರಿಗೆ ನರವಿನ ಮಹಾಪೂರವೇ ಹರಿದು ಬಂದಿತ್ತು.

ಇದೀಗ ದಾನಾ ಮಾಂಜಿ ಬದುಕು ಬದಲಾಗಿದ್ದು, ಹೊಸ ಪತ್ನಿ ಬಂದಿದ್ದಾಳೆ. ಮಾತ್ರವಲ್ಲ, ಆಕೆಯೀಗ ಗರ್ಭಿಣಿ. ಇದರೊಂದಿಗೆ ದಾನಾ ಮಾಂಜಿ ಹೊಸ ಬೈಕ್ ಖರೀದಿಸಿದ್ದಾರೆ. ಹೊಸ ಮನೆಯನ್ನೂ ಕಟ್ಟಿಸುತ್ತಿದ್ದಾರೆ. ಇದೇ ಅಲ್ಲವೇ ಜೀವನ….

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...