alex Certify
ಕನ್ನಡ ದುನಿಯಾ       Mobile App
       

Kannada Duniya

ಪಶ್ಚಿಮ ಘಟ್ಟದಲ್ಲಿ ಪತ್ತೆಯಾಗಿದೆ ಹೊಸ ಹಾವು…!

ಪಶ್ಚಿಮ ಘಟ್ಟಗಳಲ್ಲಿ ಹೊಸ ಹಾವೊಂದು ಪತ್ತೆಯಾಗಿದೆ. ಪ್ರಸ್ತುತ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಅನಾಕಟ್ಟೆ ಕಾಡುಗಳಲ್ಲಿ ಮಾತ್ರ ಈ ಹಾವು ಕಾಣಸಿಗುತ್ತಿದೆ. ಈ ಕ್ಷೇತ್ರಕ್ಕೆ ಸಸ್ಯಶಾಸ್ತ್ರಜ್ಞ ಎಸ್. ಭೂಪತಿ ನೀಡಿದ ಕೊಡುಗೆಗಳಿಂದಾಗಿ, ಈ ಹಾವಿಗೆ ಉಪ್ಪೆಲೆಟಿಸ್ ಭೂಪತಿ ಎಂದು ಹೆಸರಿಡಲಾಗಿದೆ.

ಕೇವಲ 40 ಸೆಂ.ಮೀ. ಉದ್ದದ, ಕಂದು ಬಣ್ಣದ ಈ ಹಾವನ್ನ ಪಶ್ಚಿಮ ಘಟ್ಟಗಳ ಉರಗ ಪ್ರಭೇದಕ್ಕೆ ಸೇರಿಸಲಾಗಿದೆ. ಈ ಸರೀಸೃಪ ಕೇವಲ ಭಾರತ ಮತ್ತು ಶ್ರೀಲಂಕಾದಲ್ಲಿ ಮಾತ್ರ ಕಂಡು ಬರುತ್ತದೆ. ವಿಷಕಾರಿಯಲ್ಲದ ಈ ಹಾವು ಬಿಲ ತೋಡುವುದು ಮತ್ತು ಅದರಲ್ಲಿರುವ ಮಣ್ಣಿನ ಹುಳುಗಳನ್ನ ತಿನ್ನುತ್ತದೆ.

ಇದರ ಬಾಲ ದೊಡ್ಡದಾಗಿದ್ದು, ಸಮತಟ್ಟಾಗಿರುತ್ತದೆ. ವಿಶ್ವದಾದ್ಯಂತ ಹಾವುಗಳ ಹೊಸ ಹೊಸ ಪ್ರಭೇದಗಳು ಕಂಡು ಬರುತ್ತಿವೆ. ಅದರಲ್ಲಿ ಮಧ್ಯ ಮತ್ತು ದಕ್ಷಿಣ ಅಮೆರಿಕಾಗಳು ಅತಿ ಹೆಚ್ಚು ವೈವಿಧ್ಯಮಯ ಹಾವಿನ ಪ್ರಬೇಧ ಹೊಂದಿರುವ ಪ್ರದೇಶಗಳಾಗಿವೆ. ಇನ್ನು ವಿಶ್ವದಲ್ಲಿ ಸುಮಾರು 3500 ಹಾವಿನ ಜಾತಿಗಳಿದ್ದು, ಅವುಗಳಲ್ಲಿ ಇದುವರೆಗೂ 886 ಜಾತಿಯ ಹಾವುಗಳು ಇಲ್ಲಿ ಕಂಡು ಬಂದಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...