alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದಲ್ಲಿ ಆತಂಕಕ್ಕೆ ಕಾರಣವಾಯ್ತು ಲ್ಯಾಪ್ಟಾಪ್

ಕೇರಳದ ತಿರುವನಂತಪುರಂನಿಂದ ಬೆಂಗಳೂರಿಗೆ ಹೊರಟಿದ್ದ ವಿಮಾನದಲ್ಲಿದ್ದ ಲ್ಯಾಪ್ಟಾಪ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಂಡಿಯೋ 6E-445 ವಿಮಾನದಲ್ಲಿ ಇಟ್ಟಿದ್ದ ಕಪ್ಪು ಬಣ್ಣದ ಬ್ಯಾಗ್ ಒಂದರಿಂದ ಸುಟ್ಟ ವಾಸನೆ ಬರಲಾರಂಭಿಸಿತ್ತು.

ಬ್ಯಾಗ್ ನೊಳಗಿದ್ದ ಲ್ಯಾಪ್ಟಾಪ್ ಗೆ ಬೆಂಕಿ ಹೊತ್ತಿಕೊಂಡಿರೋದನ್ನು ಗಮನಿಸಿದ ವಿಮಾನ ಸಿಬ್ಬಂದಿ ಕೂಡಲೇ ಕ್ಯಾಪ್ಟನ್ ಗೆ ಮಾಹಿತಿ ನೀಡಿದ್ದಾರೆ. ಸೀಟ್ ನಂಬರ್ 24ರಲ್ಲಿದ್ದ ಪ್ರಯಾಣಿಕನನ್ನು ಬೇರೆಡೆ ಸ್ಥಳಾಂತರಿಸಿ, ಲ್ಯಾಪ್ಟಾಪ್ ಬೆಂಕಿಯನ್ನು ನಂದಿಸಲಾಯ್ತು.

ಈ ಘಟನೆಯಿಂದ ಪ್ರಯಾಣಿಕರಲ್ಲಿ ಆತಂಕ ಕಾಣಿಸಿಕೊಂಡಿತ್ತು. ಆದ್ರೆ ಯಾವುದೇ ಸಮಸ್ಯೆಯಿಲ್ಲದೆ ವಿಮಾನ ಬೆಂಗಳೂರಿಗೆ ಬಂದಿಳಿದಿದೆ. ನವೆಂಬರ್ 11ರಂದು ನಡೆದಿರೋ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ತಿಂಗಳು ದೆಹಲಿ-ಇಂದೋರ್ ನಡುವಣ ವಿಮಾನದಲ್ಲಿ ಮೊಬೈಲ್ ಸ್ಫೋಟಗೊಂಡಿತ್ತು.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...