alex Certify
ಕನ್ನಡ ದುನಿಯಾ       Mobile App
       

Kannada Duniya

ಶಬ್ಧಮಾಲಿನ್ಯ ತಡೆಗೆ ಜನ ಅನುಸರಿಸಿದ್ದಾರೆ ವಿಭಿನ್ನ ಮಾರ್ಗ

ದೇಶ ಮಲೀನವಾಗ್ತಿದೆ. ವಾಯುಮಾಲಿನ್ಯ ದಿನ ದಿನಕ್ಕೂ ಉಸಿರುಗಟ್ಟಿಸುತ್ತಿದೆ. ಸುಪ್ರೀಂ ಕೋರ್ಟ್ ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಇದ್ರ ಜೊತೆಗೆ ಅನೇಕರು ಮುಖಕ್ಕೆ ಮಾಸ್ಕ್ ಧರಿಸಿ ಆರೋಗ್ಯದತ್ತ ಗಮನ ನೀಡ್ತಿದ್ದಾರೆ. ಆದ್ರೆ ಶಬ್ಧ ಮಾಲಿನ್ಯದ ವಿರುದ್ಧ ಮಾತ್ರ ಯಾವುದೇ ಕೂಗು ಕೇಳಿ ಬರ್ತಿಲ್ಲ.

ಹಬ್ಬ ಹರಿದಿನಗಳಲ್ಲಿ ಶಬ್ಧ ಮಾಲಿನ್ಯ ಎಲ್ಲೆ ಮೀರುತ್ತಿದೆ. ಶಬ್ಧ ಮಾಲಿನ್ಯ ನಿಯಂತ್ರಣಕ್ಕೆ ಮುಂಬೈ ಜನರು ವಿಭಿನ್ನ ಮಾರ್ಗವನ್ನು ಅಳವಡಿಸಿಕೊಂಡು ಮಾದರಿಯಾಗಿದ್ದಾರೆ. ಮುಂಬೈನಲ್ಲಿ ಕಳೆದ 40 ದಿನಗಳಿಂದ ಸತ್ಸಂಗ ನಡೆಯುತ್ತಿದೆ. ಸತ್ಸಂಗದಲ್ಲಿ ಪಾಲ್ಗೊಂಡ ಜನರ ಕಿವಿಯಲ್ಲಿ ಹೆಡ್ಫೋನ್ ಗಳಿವೆ. ಜನರು ಹೆಡ್ಫೋನ್ ಹಾಕಿಕೊಂಡು ಸತ್ಸಂಗ ಕೇಳುತ್ತಿದ್ದಾರೆ.

ಧ್ವನಿವರ್ದಕ ಬಳಕೆಯಿಂದ ಉಳಿದ ಜನರಿಗೆ ತೊಂದರೆಯಾಗುತ್ತದೆ. ಶಬ್ಧ ಮಾಲಿನ್ಯ ಮಕ್ಕಳ ವಿದ್ಯಾಭ್ಯಾಸದಿಂದ ಹಿಡಿದು ಸಾಮಾನ್ಯರ ನೆಮ್ಮದಿ ಕೆಡಿಸುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಆಯೋಜಕರು ಬ್ಲ್ಯೂಟೂತ್ ಹೆಡ್ಫೋನ್ ಸೌಲಭ್ಯ ನೀಡಿದ್ದಾರೆ.

ಹಿಂದಿನ ವರ್ಷ ಕೂಡ ಸತ್ಸಂಗ ನಡೆದಿತ್ತು. ಅಲ್ಲಿನ ಧ್ವನಿವರ್ದಕ ಅನೇಕರ ನೆಮ್ಮದಿ ಕೆಡಿಸಿತ್ತು. ಈ ಬಗ್ಗೆ ಜನರು ದೂರು ದಾಖಲಿಸಿದ್ದರು. ಶ್ರೀಸಾಮಾನ್ಯರಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿದ ಆಯೋಜಕರು ಈ ಬಾರಿ ಇಂಥ ಮಾರ್ಗ ಹಿಡಿದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...