alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿಯ ಮನೆ ತಪಾಸಣೆಗೊಳಪಡಿಸಿದ ಪೊಲೀಸರಿಗೆ ಶಾಕ್

pratyushaa_321ಮುಂಬೈನ ಕಾಂಡೀವಲಿಯಲ್ಲಿರುವ ತನ್ನ ಮನೆಯಲ್ಲೇ ನೇಣು ಹಾಕಿಕೊಂಡು ಸಾವನ್ನಪ್ಪಿದ ‘ಬಾಲಿಕಾ ವಧು’ ಖ್ಯಾತಿಯ ನಟಿ ಪ್ರತ್ಯುಷಾ ಬ್ಯಾನರ್ಜಿಯವರ ಮನೆಯನ್ನು ತಪಾಸಣೆಗೊಳಪಡಿಸಿದ ಪೊಲೀಸರು ಅಲ್ಲಿನ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದಾರೆ.

ಈ ಮನೆಯಲ್ಲಿ ಪ್ರತ್ಯುಷಾ ತನ್ನ ಬಾಯ್ ಫ್ರೆಂಡ್ ರಾಹುಲ್ ರಾಜ್ ಸಿಂಗ್ ಜೊತೆ ವಾಸಿಸುತ್ತಿದ್ದು, ತನಿಖೆಗಾಗಿ ಅಲ್ಲಿಗೆ ಭೇಟಿ ನೀಡಿದ ಪೊಲೀಸರಿಗೆ ಮನೆಯ ತುಂಬ ಹರಡಿಕೊಂಡಿದ್ದ ಸಿಗರೇಟು ತುಂಡುಗಳು, ಮದ್ಯದ ಬಾಟಲ್ ಗಳು ಜೊತೆಗೆ ಅರ್ಧಬರ್ಧ ತಿಂದಿಟ್ಟಿದ್ದ ಸ್ನಾಕ್ಸ್ ಕಂಡು ಬಂದಿದೆ. ಇಡೀ ಮನೆಯಲ್ಲಿ ವಸ್ತುಗಳು ಎಲ್ಲೆಂದರಲ್ಲಿ ಹರಡಿದ್ದು ಕಂಡು ಬಂದಿದೆ.

ಆತ್ಮಹತ್ಯೆ ದೃಶ್ಯವನ್ನು ಪೊಲೀಸರು ಮರು ಸೃಷ್ಟಿಸಿದ್ದು, ಫ್ಯಾನ್ ನ ಮಧ್ಯಕ್ಕೆ ತನ್ನ ದುಪ್ಪಟ್ಟಾದ ಒಂದು ತುದಿಯನ್ನು ಕಟ್ಟಿದ್ದ ನಟಿ ಮತ್ತೊಂದು ತುದಿಯಿಂದ ನೇಣು ಬಿಗಿದುಕೊಂಡಿರಬಹುದೆಂದು ಶಂಕಿಸಿದ್ದಾರೆ. ಈ ಮಧ್ಯೆ ಪ್ರತ್ಯುಷಾ ಸ್ನೇಹಿತರು, ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮನಃಸ್ಥಿತಿ ಹೊಂದಿರಲಿಲ್ಲ. ಬದಲಾಗಿ ರಾಹುಲ್ ತನಗೆ ವಂಚಿಸಿದ್ದರ ಕುರಿತಾಗಿ ಕಾನೂನಾತ್ಮಕ ಹೋರಾಟ ನಡೆಸಲು ಸಿದ್ದತೆ ನಡೆಸಿದ್ದಳು ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...