alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರಿಂದ ಮಹಿಳೆಯರಿಗಾಗಿ ಆರಂಭವಾಗಿದೆ ಈ ಸೇವೆ

new-auto-service-in-surat-by-the-women-for-the-womenಮಹಿಳೆಯರ ಮೇಲಿನ ಕಿರುಕುಳ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಗುಜರಾತ್ ನ ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ಹೊಸ ಸೇವೆಯೊಂದನ್ನು ಆರಂಭಿಸಿದೆ. ಅರ್ಹ ಮಹಿಳೆಯರನ್ನು ಗುರುತಿಸಿ ಅವರಿಗೆ ಆಟೋ ಚಾಲನೆ ತರಬೇತಿ ನೀಡಿರುವುದಲ್ಲದೇ ಆಟೋ ಖರೀದಿಸಲು ಹಣಕಾಸು ನೆರವನ್ನೂ ಒದಗಿಸಿದೆ.

ಮಹಿಳೆಯರು ಚಾಲನೆ ಮಾಡುವ ಈ ಆಟೋಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಮಾತ್ರ ಅವಕಾಶವಿರಲಿದೆ. ಅಲ್ಲದೇ ಹೆಣ್ಣು ಮಕ್ಕಳ ಶಾಲಾ ವಿದ್ಯಾರ್ಥಿಗಳು ಪ್ರತಿನಿತ್ಯ ಈ ಆಟೋದಲ್ಲಿ ಸಂಚರಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಬ್ಯಾಂಕ್ ಆಫ್ ಬರೋಡಾ ಜೊತೆ ಒಪ್ಪಂದ ಮಾಡಿಕೊಂಡಿರುವ ಸೂರತ್ ಮುನ್ಸಿಪಲ್ ಕಾರ್ಪೊರೇಷನ್, ಮೊದಲ ಹಂತದಲ್ಲಿ ಆಯ್ಕೆಯಾಗಿರುವ 15 ಮಂದಿ ಮಹಿಳೆಯರು ಆಟೋ ಖರೀದಿಸಲು ಶೇ.7 ಬಡ್ಡಿ ದರದಲ್ಲಿ ತಲಾ 84 ಸಾವಿರ ರೂ. ಸಾಲ ಕೊಡಿಸಿದೆ.

ಈ ಸಾಲಕ್ಕೆ ಶೇ.25 ಸಬ್ಸಿಡಿಯೂ ಇದ್ದು, ಮಹಿಳೆಯರು ಆರ್ಥಿಕವಾಗಿ ಸಬಲವಾಗುವುದಲ್ಲದೇ ಮಹಿಳಾ ಪ್ರಯಾಣಿಕರ ಸುರಕ್ಷತೆಗೂ ಅನುಕೂಲವಾಗಲಿದೆ ಎಂಬುದು ಮುನ್ಸಿಪಲ್ ಕಾರ್ಪೊರೇಷನ್ ಮೂಲಗಳು ಹೇಳಿವೆ. ಮುಂದಿನ ಹಂತದಲ್ಲಿ ಮತ್ತಷ್ಟು ಮಹಿಳೆಯರು ಪಿಂಕ್ ಆಟೋ ಚಾಲನೆ ಮಾಡಲಿದ್ದು, ಇದರ ಜೊತೆಗೆ ಪಿಂಕ್ ವ್ಯಾನ್ ಸೇವೆಯನ್ನೂ ಆರಂಭಿಸಲು ಯೋಜಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...