alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರಿ ಮನೆಯಲ್ಲಿದ್ದ ಈ ಎಲ್ಲ ವಸ್ತು ತೆಗೆದುಕೊಂಡು ಹೋಗಿದ್ದಾರೆ ಅಖಿಲೇಶ್

ಸುಪ್ರೀಂ ಕೋರ್ಟ್ ಆದೇಶದ ನಂತ್ರ ಉತ್ತರ ಪ್ರದೇಶದ ಮಾಜಿ ಸಿಎಂ ಗಳು ತಮ್ಮ ಸರ್ಕಾರಿ ಬಂಗಲೆ ತೊರೆಯುತ್ತಿದ್ದಾರೆ. ಶುಕ್ರವಾರ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಸರ್ಕಾರಿ ಬಂಗಲೆ ಬಿಟ್ಟು ತಮ್ಮ ಮನೆಗೆ ತೆರಳಿದ್ದಾರೆ. ಶನಿವಾರ ಮಾಜಿ ಸಿಎಂ ಅಖಿಲೇಶ್ ಯಾದವ್ ಮನೆ ಬದಲಿಸಿದ್ದಾರೆ.

ಅಖಿಲೇಶ್ ಯಾದವ್ ಸರ್ಕಾರಿ ಬಂಗಲೆಯಲ್ಲಿ ಅಳವಡಿಸಿದ್ದ ಜಿಮ್ ತೆಗೆದು ಹಾಕಿದ್ದಾರೆ. ಬಂಗಲೆಗೆ ಹಾಕಿದ್ದ ಗ್ಲಾಸ್ ಗಳನ್ನು ಅಖಿಲೇಶ್ ತೆಗೆಸಿದ್ದಾರೆ. ಬಂಗಲೆಯಲ್ಲಿದ್ದ ವಿದೇಶಿ ಮರಗಳು, ಸಸ್ಯಗಳನ್ನು ಹೊಸ ಮನೆಗೆ ಶಿಫ್ಟ್ ಮಾಡಿದ್ದಾರೆ. ಉತ್ತರ ಪ್ರದೇಶದ ಮಾಜಿ ಸಿಎಂ ಗಳಿಗೆ ಸರ್ಕಾರಿ ಬಂಗಲೆ ಖಾಲಿ ಮಾಡಲು 15 ದಿನಗಳ ಸಮಯ ನೀಡಲಾಗಿತ್ತು. ಜೂನ್ 2ರಂದು ಸಮಯ ಮುಕ್ತಾಯವಾಗಿದೆ. ಹಾಗಾಗಿ ಮಾಜಿ ಸಿಎಂಗಳು ಬೇರೆ ಮನೆಗೆ ಶಿಫ್ಟ್ ಆಗ್ತಿದ್ದಾರೆ.

ಸುಶಾಂತ್ ಗಾಲ್ಫ್ ಸಿಟಿಯಲ್ಲಿ ಅಖಿಲೇಶ್ ಹಾಗೂ ಮುಲಾಯಂ ಮನೆಗೆ ಬಣ್ಣ ಹಚ್ಚಲಾಗ್ತಿದೆ. ಅಖಿಲೇಶ್ ಮನೆ ವಿಳಾಸ c-2/190 ಆದ್ರೆ ಮುಲಾಯಂ ಮನೆ ವಿಳಾಸ c-3/12A. ಲಕ್ನೋದಲ್ಲಿ ಅಧಿಕೃತ ಮನೆಯಿಲ್ಲ. ಬಾಡಿಗೆ ಮನೆ ಹುಡುಕಲು 15 ದಿನ ಸಾಲೋದಿಲ್ಲವೆಂದು ಅಖಿಲೇಶ್ ಹೇಳಿದ್ದರು. ಸರ್ಕಾರಿ ಬಂಗಲೆ ಖಾಲಿ ಮಾಡೋದ್ರಿಂದ ಒಂದು ಲಾಭವಾಗಿದೆ. ಮನೆ ಕಟ್ಟುವ ಕಾರ್ಯ ನಡೆದಿದೆ ಎಂದು ಅವ್ರು ಹೇಳಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...