alex Certify
ಕನ್ನಡ ದುನಿಯಾ       Mobile App
       

Kannada Duniya

ಸದ್ಯ ಮಾರುಕಟ್ಟೆಗೆ ಬರಲ್ಲ 100 ರೂ. ಹೊಸ ನೋಟು

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 100 ರೂಪಾಯಿ ಹೊಸ ನೋಟಿನ ಮೊದಲ ಫೋಟೋವನ್ನು ಬಿಡುಗಡೆ ಮಾಡಿದೆ. ಆದ್ರೆ ಹೊಸ ನೋಟುಗಳು ಮಾತ್ರ ಸದ್ಯ ಮಾರುಕಟ್ಟೆಗೆ ಬರ್ತಿಲ್ಲ. ಇನ್ನೂ ಒಂದು ವರ್ಷ ಬೇಕೆಂದು ಮೂಲಗಳು ಹೇಳಿವೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುದ್ರಿಸುತ್ತಿರುವ ಹೊಸ 100 ರೂಪಾಯಿ ನೋಟುಗಳು ಈ ಎಟಿಎಂ ಮಷಿನ್ ಗೆ ಹೊಂದಾಣಿಕೆಯಾಗುವುದಿಲ್ಲ. ಹಾಗಾಗಿ ಎಲ್ಲ ಬ್ಯಾಂಕ್ ಗಳು ಎಟಿಎಂ ಯಂತ್ರಗಳಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ದೇಶದಲ್ಲಿರುವ ಸುಮಾರು 2.4 ಲಕ್ಷ ಎಟಿಎಂಗಳಲ್ಲಿ ಈ ಬದಲಾವಣೆಯಾಗಬೇಕಿದೆ.

ಎಟಿಎಂ ಆಪರೇಷನ್ ಇಂಡಸ್ಟ್ರಿ ಪ್ರಕಾರ, ಹೊಸ 100 ರೂಪಾಯಿ ನೋಟುಗಳಿಂದಾಗಿ 100 ಕೋಟಿ ಹೊರೆ ಬೀಳಲಿದೆ. ಇದೇ ಕಾರಣಕ್ಕೆ ಹೊಸ 100 ರೂಪಾಯಿ ನೋಟು ಮಾರುಕಟ್ಟೆಗೆ ಬರಲು ವಿಳಂಬವಾಗಲಿದೆ. ಇತ್ತೀಚಿಗಷ್ಟೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 200 ರೂಪಾಯಿ ಹೊಸ ನೋಟುಗಳನ್ನು ಬಿಡುಗಡೆ ಮಾಡಿದೆ. 200 ರೂಪಾಯಿ ಬಿಡುಗಡೆಯಾದ ಮೇಲೆ ಎಟಿಎಂನಲ್ಲಿ ಬದಲಾವಣೆ ಮಾಡಲಾಗಿದೆ. ಈವರೆಗೂ ಎಲ್ಲ ಎಟಿಎಂಗಳಲ್ಲಿ 200 ರೂಪಾಯಿ ನೋಟು ಸಿಗ್ತಿಲ್ಲ. ಆಗ್ಲೆ ಆರ್ ಬಿಐ 100 ರೂಪಾಯಿ ಹೊಸ ನೋಟಿನ ಬಗ್ಗೆ ಘೋಷಣೆ ಮಾಡಿದೆ. ಎಟಿಎಂನಲ್ಲಿ 100 ರೂಪಾಯಿ ಹೊಸ ನೋಟುಗಳು ಸಿಗಲು 1 ವರ್ಷ ಬೇಕೆಂದು ಎಟಿಎಂ ಆಪರೇಷನ್ ಇಂಡಸ್ಟ್ರಿ ಹೇಳಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...