alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಕ್ಕಾಪಟ್ಟೆ ಹೆಚ್ಚಾಗಿದ್ದು ಜನಪ್ರತಿನಿಧಿಗಳ ಸಂಬಳ…!

ಉದ್ಯೋಗಿಗಳಿಗೆ, ನೌಕರರಿಗೆ ಹೈಕ್ ಅರ್ಥಾತ್ ಸಂಬಳದಲ್ಲಿನ ಹೆಚ್ಚಳ ಎಂದರೆ ಎಲ್ಲಿಲ್ಲದ ಖುಷಿ. ಆದರೆ ಈ ವಿಷಯದಲ್ಲಿ ಅವರಿಗಿಂತಲೂ ಹೆಚ್ಚು ಖುಷಿ ಪಡುತ್ತಿರುವವರೆಂದರೆ ಜನಪ್ರತಿನಿಧಿಗಳು. ಏಕೆಂದರೆ ಕಳೆದ 17-18 ವರ್ಷಗಳಲ್ಲಿ ಜನಪ್ರತಿನಿಧಿಗಳು ಅತ್ಯಂತ ಹೆಚ್ಚಿನ ಅಂದರೆ ಶೇ. 98 ರಷ್ಟು ಹೈಕ್ ಪಡೆದಿದ್ದಾರೆ.

ನ್ಯಾಷನಲ್ ಸ್ಯಾಂಪಲ್ ಸರ್ವೇ ಆರ್ಗನೈಸೇಷನ್ ನಡೆಸಿದ ಸಮೀಕ್ಷೆಯ ಅಂಕಿ-ಅಂಶ ಈ ಮಾಹಿತಿಯನ್ನು ಬಹಿರಂಗಗೊಳಿಸಿದೆ. 1993-94 ಮತ್ತು 2011-12ರ ಅವಧಿಯಲ್ಲಿ ವೇತನ ಹೆಚ್ಚಳದ ಲೆಕ್ಕಹಾಕಿರುವ ಈ ಸಮೀಕ್ಷೆ ಜನಪ್ರತಿನಿಧಿಗಳು, ಉನ್ನತ ಅಧಿಕಾರಿಗಳು ಹಾಗೂ ಮ್ಯಾನೇಜರ್ ಗಳು ತಮ್ಮ ವೇತನದಲ್ಲಿ ಶೇ. 98 ಹೆಚ್ಚಳ ಹೊಂದುವ ಮೂಲಕ ಅಗ್ರಸ್ಥಾನದಲ್ಲಿ ಇರುವ ಅಂಶವನ್ನು ಹೊರಗೆಡಹಿದ್ದಾರೆ.

ಆ ನಂತರದ ಸ್ಥಾನದಲ್ಲಿ ಅಂದರೆ ಶೇ. 90 ರಷ್ಟು ವೇತನ ಹೆಚ್ಚಳವನ್ನು ಇತರ ವೃತ್ತಿಪರರು ಪಡೆದಿದ್ದಾರೆ. ಈ ಸರ್ವೇ ಪ್ರಕಾರ ಅತಿ ಕಡಿಮೆ ವೇತನ ಹೆಚ್ಚಳ ಹೊಂದಿರುವವರು ಎಂದರೆ ವೃತ್ತಿಪರ ಕೃಷಿಕರು, ಮೀನುಗಾರರು ಹಾಗೂ ಯಂತ್ರಗಳ ಜೋಡಣೆಗಾರರು ಮತ್ತು ಆಪರೇಟರುಗಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...