alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕನ ಮೇಲೆ ಅತ್ಯಾಚಾರಕ್ಕೆ ಯತ್ನ: ನಾಲಿಗೆ ಕತ್ತರಿಸಿ, ಕಣ್ಣು ಕಿತ್ತ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಏಳು ವರ್ಷದ ಬಾಲಕನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪಾಪಿಯೊಬ್ಬ ಬಾಲಕನನ್ನು ಹತ್ಯೆಗೈದಿದ್ದಾನೆ. ಆಗ್ನೇಯ ದೆಹಲಿ ಓಕ್ಲಾ ಪ್ರದೇಶದ ಹರಿಕೇಶ್ ನಲ್ಲಿ ಘಟನೆ ನಡೆದಿದೆ.

ಏಪ್ರಿಲ್ 2ರಂದು ಬಾಲಕ ನಾಪತ್ತೆಯಾಗಿದ್ದಾನೆಂದು ಕುಟುಂಬಸ್ಥರು ದೂರು ನೀಡಿದ್ದರು. ಪಕ್ಕದ ಮನೆಯವನ ಜೊತೆ ಕೊನೆಯದಾಗಿ ಮಗುವನ್ನು ನೋಡಿರುವುದಾಗಿ ತಿಳಿಸಿದ್ದರು. ಪಕ್ಕದ ಮನೆ ಸಂದೀಪ್ ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ಮೊದಲು ತಪ್ಪೊಪ್ಪಿಕೊಳ್ಳದ ಸಂದೀಪ್ ನಂತ್ರ ಸತ್ಯ ಬಾಯ್ಬಿಟ್ಟಿದ್ದಾನೆ.

ಸಂದೀಪ್ ಮೊದಲು ಬಾಲಕನ ಜೊತೆ ಸಂಬಂಧ ಬೆಳೆಸಲು ಮುಂದಾಗಿದ್ದಾನೆ. ಇದಕ್ಕೆ ಬಾಲಕ ವಿರೋಧ ವ್ಯಕ್ತಪಡಿಸಿದ್ದರಿಂದ ಕೋಪಗೊಂಡ ಸಂದೀಪ್ ಮೊದಲು ಬಾಲಕನ ನಾಲಿಗೆ ಕತ್ತರಿಸಿದ್ದಾನೆ. ನಂತ್ರ ಕಣ್ಣುಗಳನ್ನು ಕಿತ್ತು, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬ್ಯಾಗ್ ನಲ್ಲಿ ಶವ ತುಂಬಿ ಚರಂಡಿಗೆ ಎಸೆದಿದ್ದಾನೆ.

ಬ್ಯಾಗ್ ನಲ್ಲಿದ್ದ ಶವ ನೋಡಿ ಪೊಲೀಸರೇ ದಂಗಾಗಿದ್ದಾರೆ. ಈ ಹಿಂದೆ ಕೂಡ ಸಂದೀಪ್ ಇಂಥ ಕೆಲಸ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...