alex Certify
ಕನ್ನಡ ದುನಿಯಾ       Mobile App
       

Kannada Duniya

ಹೆತ್ತವರಿಂದ್ಲೇ ನಿರ್ಲಕ್ಷ್ಯಕ್ಕೊಳಗಾದ ಬಾಲಕಿ ಮಾಡಿದ್ದೇನು?

ಮುಂಬೈನ ವಜ್ರ ವ್ಯಾಪಾರಿಯ ಪುತ್ರಿಯೊಬ್ಬಳು ಕುಟುಂಬದವರು ತನ್ನನ್ನು ನಿರ್ಲಕ್ಷಿಸ್ತಿದ್ದಾರೆ ಅನ್ನೋ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಕಥೆ ಕಟ್ಟಿದ್ದಾಳೆ. ಅಪರಿಚಿತ ವ್ಯಕ್ತಿಯೊಬ್ಬ ತನ್ನನ್ನು ಹಿಂಬಾಲಿಸುತ್ತಿದ್ದಾನೆ, ಬೆದರಿಕೆ ಕರೆ ಮಾಡ್ತಿದ್ದಾನೆ ಅಂತೆಲ್ಲಾ ಪೋಸ್ಟ್ ಮಾಡಿದ್ದಾಳೆ.

16 ವರ್ಷದ ಈ ಕಾಲೇಜು ವಿದ್ಯಾರ್ಥಿನಿ ಪೊಲೀಸರಿಗೂ ದೂರು ನೀಡಿದ್ದರು. ಪ್ರಾಥಮಿಕ ತನಿಖೆಯಲ್ಲಿ ಬಾಲಕಿ ಸುಳ್ಳು ಕಥೆ ಕಟ್ಟಿರೋದು ಬಹಿರಂಗವಾಗಿದೆ. ಕಾಲೇಜಿನಿಂದ ಮರಳಿದ ಬಳಿಕ ಮನೆಯ ಬಾಗಿಲು ತೆರೆದೇ ಇತ್ತು. ದುಷ್ಕರ್ಮಿಯೊಬ್ಬ ಒಳನುಗ್ಗಿದ್ದ.

ನನ್ನ ಕತ್ತು ಹಿಸುಕಿದ, ನಂತರ ಜೇಬಿನಲ್ಲಿದ್ದ ಪೆನ್ ನಿಂದ ಅವನಿಗೆ ಚುಚ್ಚಿದ್ದೇನೆ, ಆತನ ತಲೆ ಮೇಲೆ ಗ್ಲಾಸ್ ನಿಂದ ಹೊಡೆದೆ, ಅಲ್ಲಿಂದ ಪರಾರಿಯಾದ ಅಂತಾ ಪೊಲೀಸರ ಬಳಿ ಹೇಳಿದ್ದಳು. ಆದ್ರೆ ಕಟ್ಟದೊಳಗೆ ಯಾರೂ ಅಪರಿಚಿತರು ಪ್ರವೇಶಿಸಿಲ್ಲ ಅಂತಾ ವಾಚ್ಮನ್ ಸ್ಪಷ್ಟಪಡಿಸಿದ್ದಾನೆ.

ಪ್ರತಿ ಬಾರಿ ಪೊಲೀಸರು ವಿಚಾರಣೆಗೆ ಬಂದಾಗ ಆಕೆಗೆ ಇನ್ ಸ್ಟಾಗ್ರಾಮ್ನಲ್ಲಿ ಬೆದರಿಕೆ ಮೆಸೇಜ್ ಬರುತ್ತಿತ್ತು. ಅನುಮಾನಗೊಂಡ ಪೊಲೀಸರು ಕೂಲಂಕುಷ ವಿಚಾರಣೆ ನಡೆಸಿದಾಗ ಆಕೆ ಅಸಲಿ ವಿಷಯ ಬಾಯ್ಬಿಟ್ಟಿದ್ದಾಳೆ.

ಬಾಲಕಿಯ ಹೆತ್ತವರು ಥೈಲ್ಯಾಂಡ್ ನಲ್ಲಿ ನೆಲೆಸಿದ್ದಾರಂತೆ. ಒಮ್ಮೆಯೂ ಮಗಳನ್ನು ಅಲ್ಲಿಗೆ ಕರೆದೊಯ್ದಿಲ್ಲ. ಹೆತ್ತವರು ತನ್ನನ್ನು ನಿರ್ಲಕ್ಷಿಸ್ತಿದ್ದಾರೆ ಅನ್ನೋ ಕಾರಣಕ್ಕೆ ಬಾಲಕಿ ಈ ರೀತಿ ಸುಳ್ಳು ಕಥೆ ಕಟ್ಟಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...