alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ಲಗ್ನ ಪತ್ರಿಕೆ ಹಿಡಿದು ದೇವಸ್ಥಾನಕ್ಕೆ ಬಂದ ಅಂಬಾನಿ ಕುಟುಂಬ

ಮುಕೇಶ್ ಅಂಬಾನಿ ಮನೆಯಲ್ಲಿ ಮಗಳು ಇಶಾ ಅಂಬಾನಿ ಮದುವೆ ಸಂಭ್ರಮ ಮನೆ ಮಾಡಿದೆ. ಮದುವೆಗೆ ಸಿದ್ಧತೆಗಳು ಜೋರಾಗಿ ನಡೆದಿವೆ. ಲಗ್ನ ಪತ್ರಿಕೆ ಮುದ್ರಣವಾಗಿದ್ದು, ಮುಕೇಶ್ ಅಂಬಾನಿ ಕುಟುಂಬ ಮೊದಲ ಲಗ್ನ ಪತ್ರಿಕೆಯನ್ನು ಗಣೇಶನ ಪಾದಕ್ಕೆ ಅರ್ಪಿಸಿದೆ.

ನೀತಾ ಅಂಬಾನಿ ಹಾಗೂ ಮುಕೇಶ್ ಅಂಬಾನಿ ಸೋಮವಾರ ರಾತ್ರಿ ಸಿದ್ಧಿವಿನಾಯಕ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿ ವಿನಾಯಕನಿಗೆ ವಿಶೇಷ ಪೂಜೆ ಮಾಡಿ, ಮೊದಲ ಕಾರ್ಡನ್ನು ದೇವರಿಗೆ ಅರ್ಪಿಸಿದ್ರು. ನೀತಾ ಜೊತೆ ಅನಂತ್ ಅಂಬಾನಿ ಹಾಗೂ ಮುಕೇಶ್ ಅಂಬಾನಿ ತಾಯಿ ಕೋಕಿಲಾಬೆನ್ ಕೂಡ ದೇವಸ್ಥಾನಕ್ಕೆ ಬಂದಿದ್ದರು. ಎಲ್ಲರೂ ಸಾಂಪ್ರದಾಯಿಕ ಉಡುಗೆಯಲ್ಲಿ ದೇವರ ದರ್ಶನ ಪಡೆದ್ರು.

ನೀತಾ ಅಂಬಾನಿ ಕೈನಲ್ಲಿ ಪೂಜೆಯ ಥಾಲಿ ಜೊತೆ ಲಗ್ನ ಪತ್ರಿಕೆಯಿತ್ತು. ಆದ್ರೆ ಮದುವೆ ಎಂದು ಎಂಬ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಸಿಕ್ಕಿಲ್ಲ. ಡಿಸೆಂಬರ್ ನಲ್ಲಿ ಮದುವೆ ನಡೆಯಲಿದೆ ಎಂಬುದಷ್ಟೇ ತಿಳಿದಿದೆ. ಇಶಾ ಅಂಬಾನಿ, ಆನಂದ್ ಸೆಪ್ಟೆಂಬರ್ ಮೂರರಂದು ಉಂಗುರು ಬದಲಿಸಿಕೊಂಡಿದ್ದಾರೆ. ಇಟಲಿಯಲ್ಲಿ ಅದ್ಧೂರಿಯಾಗಿ ಎಂಗೇಜ್ಮೆಂಟ್ ನಡೆದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...