alex Certify
ಕನ್ನಡ ದುನಿಯಾ       Mobile App
       

Kannada Duniya

ಮಗನ ಎಂಗೇಜ್ಮೆಂಟ್ ಪಾರ್ಟಿಯಲ್ಲಿ ಗಮನ ಸೆಳೆದ ನೀತಾ ಅಂಬಾನಿ ಡಾನ್ಸ್

ಮುಕೇಶ್ ಅಂಬಾನಿ ಮಗ ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಮೆಹ್ತಾ ಎಂಗೇಜ್ ಆಗ್ತಿದ್ದಾರೆ. ಗುರುವಾರ ಆಕಾಶ್ ಅಂಬಾನಿ ಎಂಗೇಜ್ಮೆಂಟ್ ಪಾರ್ಟಿ ನಡೆದಿದೆ. ಮಗನ ಎಂಗೇಜ್ಮೆಂಟ್ ಪಾರ್ಟಿಯಲ್ಲಿ ನೀತಾ ಅಂಬಾನಿ ಎಲ್ಲರ ಗಮನ ಸೆಳೆದಿದ್ದಾರೆ. ನೀತಾ ಅಂಬಾನಿ ಅತ್ಯದ್ಭುತವಾಗಿ ನೃತ್ಯ ಮಾಡಿದ್ದಾರೆ.

ಮುಕೇಶ್ ಅಂಬಾನಿ ಮನೆ ಅಂಟಿಲ್ಲಾದಲ್ಲಿ ಅದ್ಧೂರಿಯಾಗಿ ಎಂಗೇಜ್ಮೆಂಟ್ ಕಾರ್ಯಕ್ರಮ ನಡೆಯಿತು. ಮುಕೇಶ್ ಅಂಬಾನಿ ಮಗಳು ನಿಶಾ ಅಂಬಾನಿ ನವ ವಧುವನ್ನು ಪದ್ಧತಿಯಂತೆ ಮನೆಗೆ ಸ್ವಾಗತಿಸಿದ್ರು. ಈ ಕಾರ್ಯಕ್ರಮದ ಕೆಲ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿವೆ.

ನೀತಾ ಅಂಬಾನಿ ಡಾನ್ಸ್ ವಿಡಿಯೋ ಕೂಡ ವೈರಲ್ ಆಗಿದೆ. ಕ್ಲಾಸಿಕಲ್ ಡಾನ್ಸರ್ ನೀತಾ ಅಂಬಾನಿ, ಮಗನ ಎಂಗೇಜ್ಮೆಂಟ್ ವೇಳೆ ಕ್ಲಾಸಿಕಲ್ ಡಾನ್ಸ್ ಮಾಡಿದ್ದಾರೆ. ಇನ್ನೊಂದು ವಿಡಿಯೋದಲ್ಲಿ ನಿಶಾ, ಶ್ಲೋಕಾ ಹಾಗೂ ಆಕಾಶ್ ರನ್ನು ಸ್ವಾಗತಿಸುತ್ತಿದ್ದಾರೆ. ಪಾರ್ಟಿಗೆ ಬಾಲಿವುಡ್ ದಂಡೇ ಬಂದಿತ್ತು. ಡಿಸೆಂಬರ್ ನಲ್ಲಿ ಮದುವೆ ನಡೆಯುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...