alex Certify
ಕನ್ನಡ ದುನಿಯಾ       Mobile App
       

Kannada Duniya

ಆ ಶಾಲಾ ಮಕ್ಕಳಿಗೆ ನೀಡಲಾಗುತ್ತೆ ಕಹಿ ಬೇವಿನ ರಸ

neem

ಶಾಲೆಯಲ್ಲಿ ಕಿಲಾಡಿ ಮಕ್ಕಳನ್ನು ನಿಯಂತ್ರಣ ಮಾಡೋದು ಕಷ್ಟ. ಅವರಿಗೆ ಹೊಡೆದು ಬಡಿದು ಮಾಡಿದ್ರೆ ಪ್ರಯೋಜನವಿಲ್ಲ. ಹಾಗಾಗಿ ಸೂರತ್ ವಿದ್ಯಾ ಕುಂಜ್ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಯೊಂದು ಅನನ್ಯ ವಿಧಾನ ಅನುಸರಿಸುತ್ತಿದೆ. ತಪ್ಪು ಮಾಡಿದ ಮಕ್ಕಳಿಗೆ ಶಿಕ್ಷೆಯಾಗಿ ಕಹಿ ಬೇವಿನ ರಸ ಕುಡಿಸುತ್ತಿದೆ.

ಬೇವಿನ ರಸ ಕಹಿಯಾಗಿರುತ್ತದೆ. ಆದ್ರೆ ಅದರಲ್ಲಿ ಬಹಳಷ್ಟು ಔಷಧಿಯ ಗುಣವಿದೆ. ಹಾಗಾಗಿ ಕಳೆದ 20 ದಿನಗಳಿಂದ ಮಕ್ಕಳಿಗೆ ಬೇವಿನ ರಸವನ್ನು ಶಿಕ್ಷೆಯಾಗಿ ನೀಡ್ತಿದ್ದೇವೆ ಎಂದಿದ್ದಾರೆ ಪ್ರಾಂಶುಪಾಲರು. ಕಹಿಯಾದ ಬೇವಿನ ರಸ ಕುಡಿದ ಮಕ್ಕಳು ಮತ್ತೆ ತಪ್ಪು ಮಾಡಲು ಮುಂದಾಗುವುದಿಲ್ಲ. ತಪ್ಪನ್ನು ಒಪ್ಪಿಕೊಳ್ಳುವ ಮಕ್ಕಳು ಕಷ್ಟಪಟ್ಟು ಬೇವಿನ ರಸ ಕುಡಿಯುತ್ತಿದ್ದಾರಂತೆ.

ಬೇವಿನ ರಸ ಬಹಳ ಒಳ್ಳೆಯದು. ರೋಗ ನಿರೋಧಕ ಶಕ್ತಿ ಇದರಲ್ಲಿದೆ. ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳನ್ನು ನಿಯಂತ್ರಿಸುವ ಶಕ್ತಿ ಇದರಲ್ಲಿದೆ. ನಾನು ನಿಯಮಿತ ರೂಪದಲ್ಲಿ ಇದನ್ನು ಸೇವಿಸುತ್ತೇನೆ. ಹಾಗೆ ಮಕ್ಕಳು ಕೂಡ ಸೇವಿಸಲೆಂದು ಬಯಸುತ್ತೇನೆ ಎನ್ನುತ್ತಾರೆ ಪ್ರಾಂಶುಪಾಲರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...