alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಮರದಲ್ಲಿ ಫ್ರೀಯಾಗಿ ಸಿಗುತ್ತೆ ಬಿಯರ್….

beer

ಜಗತ್ತು ಅಚ್ಚರಿಗಳ ಸಂಗಮವಿದ್ದಂತೆ. ಸ್ಲೋವೇನಿಯಾದಲ್ಲಿ ಬಿಯರ್ ಕಾರಂಜಿ ಚಿಮ್ಮಿದ್ರೆ, ಇಟಲಿಯಲ್ಲಿ ರೆಡ್ ವೈನ್ ಚಿಲುಮೆಯೇ ಇದೆ. ಆದ್ರೆ ಅವೆಲ್ಲವೂ ಕೃತಕವಾಗಿ ನಿರ್ಮಾಣ ಮಾಡಿದ್ದು. ದೆಹಲಿ ಯೂನಿವರ್ಸಿಟಿಯ ಮರದಲ್ಲಿ ಮಾತ್ರ ಬೇವಿನ ಬಿಯರ್ ಉಚಿತವಾಗಿ ಸಿಗುತ್ತೆ.

ವಿವಿಯ ಉತ್ತರಭಾಗದ ಕ್ಯಾಂಪಸ್ ನಲ್ಲಿ ಈ ಮರವಿದೆ. ಇದನ್ನು ವರ್ಜಿನ್ ಟ್ರೀ ಅಂತಾನೇ ಜನರು ಕರೆಯುತ್ತಾರೆ. ಪ್ರೇಮಿಗಳ ದಿನದಂದು ಅವಿವಾಹಿತರೆಲ್ಲ ಈ ಮರಕ್ಕೆ ವಿಶೇಷ ಪೂಜೆ ಸಲ್ಲಿಸ್ತಾರೆ. ಈ ಮರದಿಂದ ಯಾವಾಗಲೂ ಬಿಳಿ ಬಣ್ಣದ ನೀರು ಒಸರುತ್ತಿರುತ್ತದೆ. ಇದು ನೀಮ್ ಬಿಯರ್ ಅಂತಾನೇ ಫೇಮಸ್.

ಮದ್ಯಪ್ರಿಯರೆಲ್ಲ ಇಲ್ಲಿಗೆ ಬಂದು ಫ್ರೀಯಾಗಿ ಪೆಗ್ ಹಾಕ್ತಾರೆ. ಪಕ್ಕಾ ಹೆಂಡದ ವಾಸನೆ, ಸ್ವಲ್ಪ ಕಹಿಯಾಗಿದ್ರೂ ಈ ಮರದಲ್ಲಿ ಒಸರುವ ನೀರು ಎಲ್ಲರ ಫೇವರಿಟ್. ಪ್ರತಿದಿನ ಈ ಮರದಲ್ಲಿ 10 ಲೀಟರ್ ಮದ್ಯ ಸಿಗುತ್ತಂತೆ. ವಿವಿ ಕೆಲಸಗಾರರು, ವಿದ್ಯಾರ್ಥಿಗಳೆಲ್ಲ ಇದನ್ನು ಇಷ್ಟಪಡ್ತಾರೆ.

ಮರದ ಕ್ರ್ಯಾಕ್ ಗಳಲ್ಲಿ  ಸೂಕ್ಷ್ಮಜೀವಿಗಳು ಸೇರಿಕೊಂಡು ಆದ ಫರ್ಮೆಂಟೇಶನ್ ಹಾಗೂ ಸ್ಯಾಪ್ ನಿಂದ ಈ ರೀತಿ ಮದ್ಯ ಬರುತ್ತಿದೆ ಅನ್ನೋದು ತಜ್ಞರ ಅಭಿಪ್ರಾಯ. ಇದನ್ನು ಹಸಿಯಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಅಪಾಯವಾಗಬಹುದು ಅಂತಾ ಅವರು ಎಚ್ಚರಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...