alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕಾ ಪೌರತ್ವ ಪಡೆಯುವಲ್ಲಿ 2ನೇ ಸ್ಥಾನದಲ್ಲಿದೆ ಭಾರತ

ಅಮೆರಿಕಾ ಅನೇಕ ಭಾರತೀಯರ ಕನಸು. ಅಮೆರಿಕಾದಲ್ಲಿ ನೆಲೆಯೂರುತ್ತಿರುವ ಭಾರತೀಯರ ಸಂಖ್ಯೆ ವರ್ಷದಿಂದ ವರ್ಷಕ್ಕೂ ಹೆಚ್ಚಾಗ್ತಿದೆ.ಅತಿ ಹೆಚ್ಚು ಅಮೆರಿಕಾ ಪೌರತ್ವ ಪಡೆದ ದೇಶಗಳ ಪಟ್ಟಿಯಲ್ಲಿ ಮೆಕ್ಸಿಕೋ ನಂತ್ರದ ಸ್ಥಾನ ಭಾರತಕ್ಕಿದೆ. 2016ರಲ್ಲಿ 46 ಸಾವಿರದ 100 ಮಂದಿ ಅಮೆರಿಕಾದ ಪೌರತ್ವ ಪಡೆದಿದ್ದಾರೆ. ಅಮೆರಿಕಾ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ಇದು ಬಹಿರಂಗವಾಗಿದೆ.

ಅಮೆರಿಕಾ ಹೋಮ್ಲ್ಯಾಂಡ್ ಸೆಕ್ಯೂರಿಟಿ ಡಿಪಾರ್ಟ್ಮೆಂಟ್ ಇತ್ತೀಚಿಗೆ ಡೇಟಾವೊಂದನ್ನು ಬಿಡುಗಡೆ ಮಾಡಿದೆ. ಅದ್ರಲ್ಲಿ ಈವರೆಗೆ ಎಷ್ಟು ಜನರಿಗೆ ಪೌರತ್ವ ನೀಡಲಾಗಿದೆ ಎನ್ನುವ ವಿವರವಿದೆ. ಈ ಅಂಕಿ  ಪ್ರಕಾರ ಅಕ್ಟೋಬರ್ 1, 2015ರಿಂದ ಸೆಪ್ಟೆಂಬರ್ 30,2016ರವರೆಗೆ ಒಟ್ಟೂ 46,100 ಭಾರತೀಯರು ಅಮೆರಿಕಾದ ಪೌರತ್ವ ಪಡೆದಿದ್ದಾರೆ.

ಇದೇ ಸಮಯದಲ್ಲಿ ಮೆಕ್ಸಿಕೊದ ಒಟ್ಟೂ 7.53 ಲಕ್ಷ ಮಂದಿ ಅಮೆರಿಕಾ ನಾಗರಿಕತ್ವ ಪಡೆದಿದ್ದಾರೆ. 2016ರಲ್ಲಿ ಅಮೆರಿಕಾ ನೀಡಿದ ಪೌರತ್ವದಲ್ಲಿ ಶೇಕಡಾ 6ರಷ್ಟು ಭಾರತೀಯರೇ ನಾಗರಿಕತ್ವ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...