alex Certify
ಕನ್ನಡ ದುನಿಯಾ       Mobile App
       

Kannada Duniya

24 ಗಂಟೆ ಅವಶೇಷದಡಿಯಿದ್ದ ವ್ಯಕ್ತಿ ಬದುಕಿ ಬಂದ

solan-rescue

ಹಿಮಾಚಲ ಪ್ರದೇಶದ ಸೋಲನ್ ನಲ್ಲಿ  ಪವಾಡ ನಡೆದಿದೆ. ಭೂಕುಸಿತದಲ್ಲಿ ಅವಶೇಷಗಳಡಿಯಾದ ವ್ಯಕ್ತಿ 24 ಗಂಟೆಗಳ ನಂತ್ರ ಜೀವಂತವಾಗಿ ಹೊರಗೆ ಬಂದಿದ್ದಾನೆ. ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ ವ್ಯಕ್ತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ಸುಂದರ್ ನಗರದ ನಿವಾಸಿ ಸನ್ನಿ, ಸೋಲನ್ ನಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಪ್ರದೇಶದಲ್ಲಿ ಜೆಸಿಬಿ ವಾಹನದ ಚಾಲಕನಾಗಿ ಕೆಲಸ ಮಾಡ್ತಿದ್ದಾನೆ. ಗುರುವಾರ ಸಂಭವಿಸಿದ ಭೂಕುಸಿತದಲ್ಲಿ ಸನ್ನಿ ಅವಶೇಷಗಳಡಿ ಸಿಲುಕಿಕೊಂಡಿದ್ದ. ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ ರಕ್ಷಣಾ ಕಾರ್ಯ ಶುರುಮಾಡಿತ್ತು.

ಅವಶೇಷಗಳಡಿ ಸಿಲುಕಿದ್ದ ಸನ್ನಿ ಹೊರತೆಗೆಯುವುದು ಸುಲಭವಾಗಿರಲಿಲ್ಲ. ಒಂದು ವಸ್ತು ತೆಗೆದ್ರೆ ಇನ್ನೊಂದು ವಸ್ತು ಸನ್ನಿ ಮೈಮೇಲೆ ಬೀಳುತ್ತಿತ್ತು. ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ ಸನ್ನಿಯನ್ನು ರಕ್ಷಿಸಿದೆ. ಸತತ 24 ಗಂಟೆ ಪ್ರಯತ್ನದ ನಂತ್ರ ಸನ್ನಿ ಹೊರಗೆ ಬಂದಿದ್ದಾನೆ.

ದೇಹದ ಒಳಗೆ ಮಣ್ಣು ಹೋಗಿದ್ದು, ತಲೆಗೆ ಸ್ವಲ್ಪ ಗಾಯವಾಗಿದೆ. ಸನ್ನಿ ಅಪಾಯದಿಂದ ಪಾರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. 10 ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...