alex Certify
ಕನ್ನಡ ದುನಿಯಾ       Mobile App
       

Kannada Duniya

ಮಾವು ಮಾರಾಟ ಮಾಡಿ ಪ್ರತಿಭಟನೆ ನಡೆಸಿದ ಶಾಸಕ

ತಮ್ಮ ತೋಟದ ಮಾವಿನ ಹಣ್ಣುಗಳನ್ನು ತಿಂದಿದ್ದರಿಂದ ಸಂತಾನವಿಲ್ಲದ ದಂಪತಿಗಳಿಗೆ ಮಕ್ಕಳಾಗಿದೆ ಎಂಬ ಹೇಳಿಕೆ ನೀಡಿದ್ದ ಬಲಪಂಥೀಯ ನಾಯಕ ಸಂಭಾಜಿ ಭಿಡೆಯವರ ಬಂಧನಕ್ಕೆ ಆಗ್ರಹಿಸಿ ಮಹಾರಾಷ್ಟ್ರ ಶಾಸಕರೊಬ್ಬರು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಎನ್.ಸಿ.ಪಿ. ಶಾಸಕ ಪ್ರಕಾಶ್ ಗಜಭಿಯೆ, ಸಂಭಾಜಿ ಭಿಡೆ ರೀತಿಯಲ್ಲಿಯೇ ದಿರಿಸು ಧರಿಸಿ ಮಹಾರಾಷ್ಟ್ರ ವಿಧಾನ ಭವನದಲ್ಲಿ ಸಚಿವರು ಹಾಗೂ ಶಾಸಕರಿಗೆ ಮಾವಿನ ಹಣ್ಣು ಮಾರಾಟ ಮಾಡಿದ್ದು, ಇವರಿಗೆ ಶಾಸಕರಾದ ವಿದ್ಯಾ ಚವಾನಂದ ಸಾಥ್ ನೀಡಿದ್ದಾರೆ.

ಭೀಮಾ ಕೋರೆಗಾಂವ್ ಗಲಭೆ ಪ್ರಕರಣದಲ್ಲಿ ಸಂಭಾಜಿ ಭಿಡೆ ಆರೋಪಿಯಾಗಿದ್ದು, ಅವರನ್ನು ಕೂಡಲೇ ಬಂಧಿಸಬೇಕೆಂದು ಶಾಸಕ ಪ್ರಕಾಶ್ ಗಜಭಿಯೆ ಆಗ್ರಹಿಸಿದ್ದಾರೆ. ಈ ಮಧ್ಯೆ ತಮ್ಮ ತೋಟದ ಮಾವಿನ ಹಣ್ಣು ತಿಂದು ಕೆಲ ದಂಪತಿಗಳು ಸಂತಾನ ಭಾಗ್ಯ ಪಡೆದಿದ್ದಾರೆಂದು ಸಂಭಾಜಿ ಭಿಡೆ ಹೇಳಿರುವ ಹಿನ್ನೆಲೆಯಲ್ಲಿ ಇದನ್ನು ಸಾಬೀತುಪಡಿಸುವಂತೆ ನಾಸಿಕ್ ಮಹಾನಗರ ಪಾಲಿಕೆ ಅವರಿಗೆ ಶೋಕಾಸ್ ನೋಟಿಸ್ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...