alex Certify
ಕನ್ನಡ ದುನಿಯಾ       Mobile App
       

Kannada Duniya

ರಾಹುಲ್ ಗೆ ಮಹಾಮೈತ್ರಿ ಪ್ರಸ್ತಾಪ ಕಳುಹಿಸಿದ ಶರದ್ ಪವಾರ್

ವಿರೋಧ ಪಕ್ಷಗಳು 2019 ರ ಲೋಕಸಭಾ ಚುನಾವಣೆಯನ್ನು ಒಂದಾಗಿ ಎದುರಿಸುವ ಮಂತ್ರ ಜಪಿಸ್ತಿವೆ. ಮೋದಿ ಮಣಿಸಲು ಎಲ್ಲ ದಿಗ್ಗಜರು ಒಂದಾಗಿ ಹೋರಾಡುವ ನಿರ್ಧಾರ ತೆಗೆದುಕೊಳ್ತಿದ್ದಾರೆ. ಮಹಾರಾಷ್ಟ್ರದ ಎನ್ಸಿಪಿ ನಾಯಕ ಶರದ್ ಪವಾರ್ ಕೂಡ ಇದ್ರಿಂದ ಹೊರತಾಗಿಲ್ಲ. ಮಹಾಮೈತ್ರಿ ಪ್ರಸ್ತಾಪವನ್ನು ಪವಾರ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಕಳುಹಿಸಿದ್ದಾರೆ.

ವಿಧಾನಸಭೆಯ 288 ಸೀಟುಗಳಲ್ಲಿ 131-131 ಕ್ಷೇತ್ರಗಳನ್ನು ಹಂಚಿಕೆ ಮಾಡಿಕೊಳ್ಳುವ ಪ್ರಸ್ತಾಪವನ್ನು ಪವಾರ್, ರಾಹುಲ್ ಮುಂದಿಟ್ಟಿದ್ದಾರೆ. ಉಳಿದ 26 ಕ್ಷೇತ್ರಗಳಲ್ಲಿ ಇತರ ಮೈತ್ರಿ ಪಕ್ಷದ ಸದಸ್ಯರನ್ನು ಕಣಕ್ಕಿಳಿಸುವ ಪ್ಲಾನ್ ಮಾಡಿದ್ದಾರೆ ಶರದ್ ಪವಾರ್.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಮುಂಬೈ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಮೈತ್ರಿ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ. ಕಾಂಗ್ರೆಸ್ ಜೊತೆ ಎನ್ಸಿಪಿ ಹಾಗೂ ಇತರ ಮೈತ್ರಿ ಪಕ್ಷಗಳೂ ಒಪ್ಪಂದ ಮಾಡಿಕೊಳ್ಳಲು ಸಿದ್ಧವಿದೆ. ಲೋಕಸಭಾ ಚುನಾವಣೆಗೂ ಮುನ್ನವೇ ವಿಧಾನಸಭಾ ಚುನಾವಣೆ ಮೈತ್ರಿ ಮಾತುಕತೆ ಪೂರ್ಣಗೊಳ್ಳಲಿ ಎಂಬುದು ನಾಯಕರ ಅಭಿಪ್ರಾಯ.

ಲೋಕಸಭೆ ಸೀಟಿನ ಹಂಚಿಕೆ ಈಗಾಗಲೇ ಬಹುತೇಕ ಅಂತಿಮಗೊಂಡಿದೆ. 48 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 28 ಹಾಗೂ ಎನ್ಸಿಪಿ 18 ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಲಿದೆ. ಉಳಿದ 8 ಸೀಟುಗಳನ್ನು ಮೈತ್ರಿ ಪಕ್ಷಗಳು ಹಂಚಿಕೊಳ್ಳಲಿವೆ. ಲೋಕಸಭೆ ಹಾಗೂ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2019ರಲ್ಲಿ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...