alex Certify
ಕನ್ನಡ ದುನಿಯಾ       Mobile App
       

Kannada Duniya

ಲಿಂಗ ಬದಲಿಸಿ ಹೆಣ್ಣಾದ ನೌಕಾಪಡೆ ಇಂಜಿನಿಯರ್ ಹೋರಾಟ ಶುರು

ಭಾರತೀಯ ನೌಕಾದಳದ ಮರೀನ್ ಇಂಜಿನಿಯರ್ ಮನೀಶ್ ಗಿರಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮಹಿಳೆಯಾಗಿದ್ದಾರೆ. ನೌಕಾಪಡೆ, ಮನೀಶ್ ರನ್ನು ಮಾನಸಿಕ ರೋಗಿ ಎಂದು ಕೆಲಸದಿಂದ ತೆಗೆದು ಹಾಕುವ ತಯಾರಿ ನಡೆಸುತ್ತಿದೆ. ಈ ಸಂಬಂಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಮನೀಶ್ ನಿರ್ಧರಿಸಿದ್ದಾರೆ.

ಮನೀಶ್ ಅನೇಕ ವರ್ಷಗಳಿಂದ ಲಿಂಗ ಪರಿವರ್ತನೆ ಮಾಡುವಂತೆ ವೈದ್ಯರಿಗೆ ದುಂಬಾಲು ಬಿದ್ದಿದ್ದರು. ಆದ್ರೆ ವೈದ್ಯರು ಮನವಿ ತಿರಸ್ಕರಿಸುತ್ತ ಬಂದಿದ್ದರು. 2016ರಲ್ಲಿ ಒಮ್ಮೆ ಲಿಂಗ ಪರಿವರ್ತನೆಗೆ ಪ್ರಯತ್ನ ನಡೆದಿತ್ತು. ಆದ್ರೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರಲಿಲ್ಲ. ಈಗ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಮನೀಶ್ ತನ್ನ ಹೆಸರು ಬದಲಿಸಿಕೊಂಡಿದ್ದಾರೆ. ಸಾಬಿ ಎಂದು ಮರುನಾಮಕರಣ ಮಾಡಿಕೊಂಡಿದ್ದಾರೆ.

ಸಾಬಿ ಶಸ್ತ್ರಚಿಕಿತ್ಸೆ ನಂತ್ರ ಸೀರೆಯುಡಲು ಶುರುಮಾಡಿದ್ದಾರೆ. ಕೂದಲನ್ನು ಉದ್ದವಾಗಿ ಬೆಳೆಸಿದ್ದಾರೆ. ಕೆಲಸದ ವೇಳೆ ನೌಕಾದಳದ ಸಮವಸ್ತ್ರ ಧರಿಸುತ್ತಾರೆ. ಆದ್ರೆ ನೌಕಾಪಡೆ ಮಹಿಳೆ ಎನ್ನುವ ಕಾರಣ ನೀಡಿ ಕೆಲಸದಿಂದ ತೆಗೆದು ಹಾಕುವ ಯತ್ನ ನಡೆಸುತ್ತಿದೆ ಎಂದು ಸಾಬಿ ಆರೋಪ ಮಾಡಿದ್ದಾರೆ. ಹಿರಿಯ ಅಧಿಕಾರಿಗಳು ಕೆಲ ಸಮಯ ಪುರುಷ ಮನೋವೈದ್ಯಕೀಯ ವಾರ್ಡ್ ನಲ್ಲಿ ಚಿಕಿತ್ಸೆಗೆ ಸೇರಿಸಿದ್ದರಂತೆ. ಇದು ಜೈಲಿನಂತೆ ಭಾಸವಾಗ್ತಿತ್ತು ಎಂದು ಸಾಬಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...