alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಪಕ್ಕೆ ಚುಂಬಿಸಿದ ಯುವಕ ಅಲ್ಲೇ ಹೆಣವಾದ

cobra

ನವಿ ಮುಂಬೈನಲ್ಲಿ ದಾರುಣ ಘಟನೆಯೊಂದು ನಡೆದಿದೆ. ಹಾವಾಡಿಗ ಯುವಕನೊಬ್ಬ ತಾನು ರಕ್ಷಿಸಿದ ಸರ್ಪದ ತಲೆಗೆ ಮುತ್ತಿಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಸೋಮ್ನಾಥ್ ಮಾತ್ರೆ ಎಂಬಾತ ವಿಷ ಸರ್ಪವನ್ನು ಹಿಡಿದಿದ್ದ, ಫೋಟೋ ತೆಗೆಸಿಕೊಳ್ಳೋಣ ಅಂತಾ ಸರ್ಪದ ತಲೆ ಮೇಲೆ ಮುತ್ತುಕೊಡಲು ಹೋಗಿದ್ದಾನೆ.

ಈ ವೇಳೆ ಹಾವು ಆತನಿಗೆ ಕಡಿದಿದ್ದು, ವಿಷವೇರಿ ಸಾವನ್ನಪ್ಪಿದ್ದಾನೆ. ಕಳೆದ 12 ವರ್ಷಗಳಲ್ಲಿ ಒಟ್ಟು 31 ಹಾವಾಡಿಗರು ಈ ರೀತಿ ಹಾವು ಕಡಿತದಿಂದ ಮೃತಪಟ್ಟಿದ್ದಾರೆ. ಸೋಮ್ನಾಥ್ ನವಿ ಮುಂಬೈನ ಬೇಲಾಪುರದವನು, ಹಾವು ಹಿಡಿಯುವುದೇ ಅವನ ಕಾಯಕ. ಇದುವರೆಗೆ ನೂರಕ್ಕೂ ಹೆಚ್ಚು ಹಾವುಗಳನ್ನು ಹಿಡಿದಿದ್ದ.

ಫೆಬ್ರವರಿ 2ರಂದು ತನ್ನ ಮನೆಯ ಬಳಿಯೇ ಸುತ್ತಮುತ್ತ ಎಲ್ಲೋ ಇದ್ದ ಈ ನಾಗರ ಹಾವನ್ನು ಹಿಡಿದು ತಂದಿದ್ದ. ಹಾವನ್ನು ಬೇರೆಡೆಗೆ ತಂದು ಅದರ ತಲೆ ಮೇಲೆ ಮುತ್ತಿಡಲು ಮುಂದಾಗಿದ್ದಾನೆ. ಈ ವೇಳೆ ಇದ್ದಕ್ಕಿದ್ದಂತೆ ಟರ್ನ್ ಆದ ಸರ್ಪ ಸೋಮ್ನಾಥ್ ಎದೆಗೆ ಕಚ್ಚಿದೆ. 5 ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ ಸೋಮ್ನಾಥ್ ಕೊನೆಗೆ ಸಾವನ್ನಪ್ಪಿದ್ದಾನೆ. ಇಂತಹ ದುರ್ಘಟನೆ ಪದೇ ಪದೇ ನಡೆಯುತ್ತಿದ್ದು, ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ವನ್ಯಜೀವಿ ಛಾಯಾಗ್ರಾಹಕ ಕೇದಾರ್ ಭಿಡೆ ಒತ್ತಾಯಿಸಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...