alex Certify
ಕನ್ನಡ ದುನಿಯಾ       Mobile App
       

Kannada Duniya

ತಂದೆ-ಮಗಳಿಗೆ ಅಕ್ರಮ ಸಂಬಂಧವಿದೆ ಎಂದು ಪುತ್ರಿಯನ್ನೇ ಕೊಂದ ತಾಯಿ

ಮುಂಬೈನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ತಾಯಿಯೇ ಹತ್ಯೆ ಮಾಡಿದ್ದಾಳೆ. ತಂದೆಯ ಜೊತೆಗೆ 16 ವರ್ಷದ ಬಾಲಕಿಗೆ ಅನೈತಿಕ ಸಂಬಂಧವಿದೆ ಅನ್ನೋ ಅನುಮಾನದ ಮೇಲೆ ತಾಯಿ ಈ ಕೃತ್ಯ ಎಸಗಿದ್ದಾಳೆ.

ಮಾರ್ಚ್ 3ರಂದು ಬಾಲಕಿ ಮರಾಠಿ ಪರೀಕ್ಷೆ ಬರೆದಿದ್ದಳು. ಅದಾದ ಮರುದಿನವೇ ಆಕೆಯ ತಾಯಿ ದುಪ್ಪಟ್ಟಾದಿಂದ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯನ್ನು ಕತ್ತು ಹಿಸುಕಿ ಕೊಂದಿರೋದು ಬೆಳಕಿಗೆ ಬಂದಿತ್ತು.

ಬಾಲಕಿಯ ತಂದೆ ಸಿವಿಲ್ ಕಾಂಟ್ರಾಕ್ಟರ್. ಮಗಳ ಜೊತೆಗೇ ಆತ ಅಕ್ರಮ ಸಂಬಂಧ ಹೊಂದಿದ್ದ ಎಂಬ ಬಗ್ಗೆ ಯಾವ ಸಾಕ್ಷ್ಯವೂ ಸಿಕ್ಕಿಲ್ಲ. ಮಾರ್ಚ್ 4ರಂದು ಮನೆಯಲ್ಲಿ ಬೇರೆ ಯಾರೂ ಇಲ್ಲದ ಸಮಯದಲ್ಲಿ ಮಹಿಳೆ, ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.

ನಂತರ ಪತಿಗೆ ಕರೆ ಮಾಡಿ ಮಗಳ ಆರೋಗ್ಯ ಹದಗೆಟ್ಟಿದೆ ಅಂತಾ ತಿಳಿಸಿದ್ದಾಳೆ. ಆತ ಬರುವಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಳು. ಕಳೆದ 6 ತಿಂಗಳಿನಿಂದ ಬಾಲಕಿಗೆ ತಾಯಿ ಹಿಂಸೆ ನೀಡುತ್ತಿದ್ದಳು ಅಂತಾ ಆಕೆಯ ಗೆಳತಿ ತಿಳಿಸಿದ್ದಾರೆ. ಇದರಿಂದ ನೊಂದ ಬಾಲಕಿ ಎರಡು ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...