alex Certify
ಕನ್ನಡ ದುನಿಯಾ       Mobile App
       

Kannada Duniya

ಸಿದ್ದು ಹೆಗಲಿಗೆ ಈ ಜವಾಬ್ದಾರಿ ಹೊರಿಸುತ್ತಂತೆ ಬಿಜೆಪಿ

sidhu-big

ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿಜೆಪಿ ನಾಯಕ ನವಜೋತ್ ಸಿಂಗ್ ಸಿದ್ದು ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ. ಸೋಮವಾರ ಸಿದ್ದು ಸುದ್ದಿಗೋಷ್ಠಿ ನಡೆಸಿದ್ದು, ಅದ್ರ ನಂತ್ರ ಬಿಸಿ ಬಿಸಿ ಚರ್ಚೆಯಾಗ್ತಾ ಇದೆ. ಬಿಜೆಪಿ ತೊರೆದು ಸಿದ್ದು ಬೇರೆ ಪಕ್ಷ ಸೇರ್ತಾರಾ ಇಲ್ಲ ಬಿಜೆಪಿ ಸಿದ್ದುಗೆ ಬೇರೆ ಜವಾಬ್ದಾರಿ ನೀಡುತ್ತಾ ಎಂಬುದು ಸದ್ಯ ಚರ್ಚೆಯ ವಿಷಯವಾಗಿದೆ.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತೊರೆಯುವ ಬಗ್ಗೆ ಸಿದ್ದು ಯಾವುದೇ ಸುಳಿವು ನೀಡಿಲ್ಲ. ಜೊತೆಗೆ ಬಿಜೆಪಿ ಕೂಡ ಸಿದ್ದು ಅವರನ್ನು ಕಳೆದುಕೊಳ್ಳಲು ಸಿದ್ಧವಿಲ್ಲ. ಹಾಗಾಗಿ ಸಿದ್ದುಗೆ ಹೊಸ ಜವಾಬ್ದಾರಿ ನೀಡಲಿದೆ ಎನ್ನುವ ಮಾತುಗಳು ಕೇಳಿ ಬರ್ತಾ ಇವೆ. ನಿನ್ನೆ ಸಿದ್ದು ಸುದ್ದಿಗೋಷ್ಠಿ ನಡೆಸಿದ ನಂತ್ರ ಪಂಜಾಬ್ ಬಿಜೆಪಿ ಅಧ್ಯಕ್ಷ ವಿಜಯ್ ಸಂಪ್ಲಾ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಸಿದ್ದು ಅವರನ್ನು ಬಿಜೆಪಿಯಲ್ಲಿಯೇ ಉಳಿಸಿಕೊಳ್ಳುವುದು ಹೇಗೆನ್ನುವ ಬಗ್ಗೆ ಚರ್ಚೆ ನಡೆದಿದೆ. ಬಿಜೆಪಿಯ ಕೆಲ ನಾಯಕರಿಗೆ ಸಿದ್ದು ಜೊತೆ ಮಾತುಕತೆ ನಡೆಸುವಂತೆ ಸೂಚಿಸಲಾಗಿದೆ. ಪಂಜಾಬ್ ಚುನಾವಣೆ ನಂತ್ರ ಕೆನಡಾ ಅಥವಾ ಬ್ರಿಟನ್ ರಾಯಭಾರಿ ಜವಾಬ್ದಾರಿ ಹೊರುತ್ತೀರಾ ಎನ್ನುವ ಪ್ರಶ್ನೆಯನ್ನು ಬಿಜೆಪಿ, ಸಿದ್ದು ಮುಂದಿಟ್ಟಿದೆ. ಆದ್ರೆ ಈವರೆಗೂ ಈ ಬಗ್ಗೆ ಸಿದ್ದು ಯಾವುದೇ ಅಭಿಪ್ರಾಯವನ್ನು ಹೊರಹಾಕಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...