alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಲ್ಫಿ ತೆಗೆದುಕೊಳ್ಳುವಾಗಲೇ ಸಾವನ್ನಪ್ಪಿದ ಕ್ರೀಡಾಪಟು

selfie-generic_650x400ಭೂಪಾಲ್: ಸೆಲ್ಫಿ ಹುಚ್ಚಿಗೆ ಈಗಾಗಲೇ ಅನೇಕರು ಪ್ರಾಣ ಕಳೆದುಕೊಂಡಿರುವ ಮಧ್ಯೆ ಅಂತಹುದೇ ಮತ್ತೊಂದು ಪ್ರಕರಣ ನಡೆದಿದೆ. ಮಧ್ಯ ಪ್ರದೇಶದ ರಾಷ್ಟ್ರಮಟ್ಟದ ಮಹಿಳಾ ಕ್ರೀಡಾಪಟುವೊಬ್ಬರು ಸೆಲ್ಫಿ ಕ್ರೇಜ್ ಗೆ ಬಲಿಯಾಗಿದ್ದಾರೆ.

ಮೂಲತಃ ಉತ್ತರಾಖಂಡ್ ನ ಕಾಶಿಪುರ್ ನಿವಾಸಿಯಾಗಿದ್ದ 21 ವರ್ಷದ ಪೂಜಾಕುಮಾರಿ ಮೃತಪಟ್ಟವರಾಗಿದ್ದು, ಇವರು ಭೂಪಾಲ್ ನ ಭಾರತೀಯ ಕ್ರೀಡಾ ಪ್ರಾಧಿಕಾರದ ಹಾಸ್ಟೆಲ್ ನಲ್ಲಿದ್ದುಕೊಂಡು ತರಬೇತಿ ಪಡೆಯುತ್ತಿದ್ದರು.

ಶನಿವಾರದಂದು ಎಂದಿನಂತೆ ತರಬೇತಿ ಮುಗಿಸಿಕೊಂಡು ಸ್ನೇಹಿತರೊಂದಿಗೆ ಹಾಸ್ಟೆಲ್ ಗೆ ತೆರಳುತಿದ್ದ ವೇಳೆ, ಮಾರ್ಗ ಮಧ್ಯದಲ್ಲಿದ್ದ ಕೆರೆ ಬಳಿ ಪೂಜಾಕುಮಾರಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಆಯತಪ್ಪಿ ಅವರು ಕೆರೆದು ಬಿದ್ದಿದ್ದು, ಈಜು ಬಾರದ ಕಾರಣ ಮುಳುಗಿದ್ದಾರೆ. ಇವರೊಂದಿಗಿದ್ದ ಸ್ನೇಹಿತರೂ ಕೂಡ ಈಜು ಬಾರದ ಕಾರಣ ಸಹಾಯಕ್ಕಾಗಿ ಹಾಸ್ಟೆಲ್ ಗೆ ಓಡಿದ್ದಾರೆ. ಬಳಿಕ ಆಗಮಿಸಿದ ಕೆಲವರು ಪೂಜಾಕುಮಾರಿಯನ್ನು ಮೇಲಕ್ಕೆತ್ತಿ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...